Monday , February 18 2019
ಕೇಳ್ರಪ್ಪೋ ಕೇಳಿ
Home / Sandalwood / ಚಿಂಗಾರಿ ಬೆಡಗಿಯ ಮದುವೆ

ಚಿಂಗಾರಿ ಬೆಡಗಿಯ ಮದುವೆ

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ದೀಪಿಕಾ ಕಾಮಯ್ಯ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬ್ಯಾಂಕ್ ಉದ್ಯೋಗಿ ಸುಮಂತ್ ದೀಪಿಕಾ ಬಾಳ ಸಂಗಾತಿಯಾಗಿ ಬಂದಿದ್ದಾರೆ.

deepika-9 deepika deepika-1 deepika-2 deepika-4 deepika-5 deepika-6 deepika-7 deepika-8ಸುಮಂತ್, ಶಾಸಕ ಆರ್ ವಿ ದೇವರಾಜ್ ಅವರ ಸಹೋದರನ ಪುತ್ರ. ಬೆಂಗಳೂರಿನ ಸಿಂಗಸಂದ್ರದಲ್ಲಿರುವ ಮಣಿಪಾಲ್ ಕೌಂಟಿಯಲ್ಲಿ ಇವರಿಬ್ಬರ ಮದುವೆ ಸಮಾರಂಭ ನಡೆದಿದೆ. ಸುಮಂತ್ ಗೋಪಿ ಮೂಲತಃ ನಾಯ್ಡುಗಳಾಗಿದ್ದು, ಹೀಗಾಗಿ, ನಾಯ್ಡು ಸಂಪ್ರದಾಯದಂತೆ ವಿವಾಹ ನಡೆದಿದೆ.

ವಿವಾಹ ಸಮಾರಂಭಕ್ಕೆ ದೀಪಿಕಾ ಮತ್ತು ಸುಮಂತ್ ಅವರ ಕುಟುಂಬಸ್ಥರು ಮತ್ತು ಆಪ್ತರು ಪಾಲ್ಗೊಂಡಿದ್ದರು. ಮದುವೆಗೂ ಮುನ್ನ ದಿನ ಮೆಹೆಂದಿ ಮತ್ತು ಹಳದಿ ಕಾರ್ಯಕ್ರಮ ನಡೆಯಿತು. ಈ ವೇಳೆ ವಧು-ವರರು ಸೇರಿದಂತೆ ಸಂಬಂಧಿಕರು ಕುಣಿದು ಕುಪ್ಪಳಿಸಿದರು.
ದರ್ಶನ್ ಅಭಿನಯದ ಚಿಂಗಾರಿ ಚಿತ್ರದ ಮೂಲಕ ದೀಪಿಕಾ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಅಲ್ಲದೆ, ಬಿಗ್‍ಬಾಸ್ ರಿಯಾಲಿಟಿ ಶೋನಲ್ಲೂ ಇವರು ಗಮನ ಸೆಳೆದಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!