Wednesday , January 24 2018
Home / News NOW / ಡ್ಯಾನ್ಸರ್ ಮೇಲೆ ಗುಂಡಿನ ದಾಳಿ : ಡ್ಯಾನ್ಸ್ ಮಾಡುವಾಗಲೇ ಯುವತಿ ಸಾವು! : ಇಲ್ಲಿದೆ ವೀಡಿಯೋ
Buy Bitcoin at CEX.IO

ಡ್ಯಾನ್ಸರ್ ಮೇಲೆ ಗುಂಡಿನ ದಾಳಿ : ಡ್ಯಾನ್ಸ್ ಮಾಡುವಾಗಲೇ ಯುವತಿ ಸಾವು! : ಇಲ್ಲಿದೆ ವೀಡಿಯೋ

ಭಟಿಂಡಾ : ಇದೊಂದು ಆತಂಕಕಾರಿ ಘಟನೆ. ಮಹಿಳೆಯೊಬ್ಬರು ವ್ಯಕ್ತಿಯೊಂದಿಗೆ ಡ್ಯಾನ್ಸ್ ಮಾಡಲು ನಿರಾಕರಿಸಿದ್ದರು. ಅದಕ್ಕೆ ವ್ಯಕ್ತಿ ಮಾಡಿದ್ದೇನು ಗೊತ್ತಾ…? ಕೇಳಿದರೆನೇ ದಿಗಿಲುಗೊಳುತ್ತೀರಿ ನೀವು…!

ಪಂಜಾಬ್‍ನ ಭಟಿಂಡಾ ನಗರದಲ್ಲಿ ನಡೆದ ಘಟನೆ ಇದು. 22 ವರ್ಷದ ಗರ್ಭಿಣಿಯೊಬ್ಬರು ಮದುವೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬನೊಂದಿಗೆ ಡ್ಯಾನ್ಸ್ ಮಾಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಾದ ಆ ವ್ಯಕ್ತಿ ಡ್ಯಾನ್ಸ್ ಮಾಡುವ ಸಂದರ್ಭದಲ್ಲೇ ಗೃಹಿಣಿಗೆ ಶೂಟ್ ಮಾಡಿದ್ದಾನೆ. ಪರಿಣಾಮ, ಈ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವವರನ್ನು ಕುಲ್ವಿಂದರ್ ಎಂದು ಗುರುತಿಸಲಾಗಿದೆ.

ಈ ಶೂಟೌಟ್ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬುಲೆಟ್ ಕುಲ್ವಿಂದರ್ ಅವರ ಎದೆಗೆ ತಾಗಿ ತಕ್ಷಣ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಈತನಿಗಾಗಿ ಬಲೆ ಬೀಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆ ವೇಳೆ, ಆರೋಪಿ ಕುಡಿದ ಮತ್ತಿನಲ್ಲಿದ್ದ ಎಂದೂ ಹೇಳಲಾಗುತ್ತಿದೆ. ಒಟ್ಟಾರೆ, ಸಂಭ್ರಮದ ಜಾಗದಲ್ಲಿ ಸೂತಕ ಮನೆ ಮಾಡಿದೆ.

courtesy : CNN-News18

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!