Sunday , September 23 2018
ಕೇಳ್ರಪ್ಪೋ ಕೇಳಿ
Home / Film News / Bollywood / ಜಯಲಲಿತಾ ಚೇತರಿಕೆಗೆ ಹಾರೈಸಿದ ಧರ್ಮೇಂದ್ರ

ಜಯಲಲಿತಾ ಚೇತರಿಕೆಗೆ ಹಾರೈಸಿದ ಧರ್ಮೇಂದ್ರ

ಮುಂಬೈ : ಹೃದಯಾಘಾತಕ್ಕೊಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಶೀಘ್ರ ಚೇತರಿಕೆಗೆ ಬಾಲಿವುಡ್ ನಟ ಧರ್ಮೇಂದ್ರ ಹಾರೈಸಿದ್ದಾರೆ. `ಇಝ್ಝತ್’ ಎಂಬ ಚಿತ್ರದಲ್ಲಿ ಧರ್ಮೇಂದ್ರ ಮತ್ತು ಜಯಲಲಿತಾ ಒಟ್ಟಾಗಿ ನಟಿಸಿದ್ದರು. ಇದು ಜಯ ಅಭಿನಯಿಸಿದ ಏಕೈಕ ಹಿಂದಿ ಚಿತ್ರವಾಗಿದೆ.

ಧರ್ಮೇಂದ್ರ ಹೇಳಿದ್ದು…

ಜಯಲಲಿತಾ ಕ್ಯೂಟ್ ನಟಿ, ಅತಿ ಸುಂದರಿ. ಅವರು ಕೇವಲ ತನ್ನ ಕೆಲಸದತ್ತ ಮಾತ್ರ ಗಮನ ಕೇಂದ್ರೀಕರಿಸುತ್ತಿದ್ದರು. ಸೆಟ್‍ನಲ್ಲಿ ಜಯಲಲಿತಾ ತುಂಬಾ ಮಾತನಾಡುತ್ತಿರಲಿಲ್ಲ. ಅವರ ಈ ನಡೆಯನ್ನು ನಾವು ತುಂಬಾ ಗೌರವಿಸುತ್ತಿದ್ದೆವು. `ಇಝ್ಝತ್’ ಚಿತ್ರದಲ್ಲಿ ಜಯ ಬಬ್ಲಿ ಹುಡುಗಿಯ ಪಾತ್ರ ಮಾಡಿದ್ದರು. ಹಲವು ವರ್ಷಗಳ ಬಳಿಕ ಇದೇ ರೀತಿಯ ಪಾತ್ರವನ್ನು `ಶೋಲೆ’ ಚಿತ್ರದಲ್ಲಿ ಹೇಮಾಮಾಲಿನಿ ನಿರ್ವಹಿಸಿದ್ದರು. ಜಯ ಒಳ್ಳೆಯ ಮನಸ್ಸಿಯುವವರು ಆಗಿದ್ದರು. ಜಯ ಅಸ್ವಸ್ಥವಾಗಿರುವ ಸುದ್ದಿ ಕೇಳಿ ಆಘಾತವಾಗಿದೆ. ಅವರ ಶೀಘ್ರ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕೆ ನಾನು ಹಾರೈಸುತ್ತೇನೆ. – ಧರ್ಮೇಂದ್ರ, ನಟ

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!