Tuesday , December 12 2017
Home / Bollywood / ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಟಿಸಲು ಸಿದ್ಧತೆ : ಆದರೆ ಷರತ್ತುಗಳು ಅನ್ವಯಿಸುತ್ತವೆ…!

ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಟಿಸಲು ಸಿದ್ಧತೆ : ಆದರೆ ಷರತ್ತುಗಳು ಅನ್ವಯಿಸುತ್ತವೆ…!

ಮುಂಬೈ : ಶಾರೂಖ್ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಟಿಸಬೇಕು ಎಂಬುದು ಅವರ ಅಭಿಮಾನಿಗಳ ಕನಸು. ಆದರೆ, ಈ ಇಬ್ಬರ ನಡುವೆ ನಡೆದ ವೈಯಕ್ತಿಕ ಘರ್ಷಣೆಯ ಕಾರಣ ಈ ಖಾನ್‍ದ್ವಯರು ದೂರ ದೂರವೇ ಉಳಿದಿದ್ದರು. `ಕರಣ್ ಅರ್ಜುನ್’ ಎಂಬ ಚಿತ್ರವೇ ಶಾರೂಖ್ ಮತ್ತು ಸಲ್ಮಾನ್ ಒಟ್ಟಾಗಿ ಕಾಣಿಸಿಕೊಂಡಿದ್ದ ಚಿತ್ರ. ಆದರೆ, ಇದಾದ ಬಳಿಕ ಈ ಜೋಡಿ ದೂರವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಇಬ್ಬರ ಮುನಿಸು ದೂರವಾಗಿತ್ತು. ಈ ಇಬ್ಬರು ಜೊತೆಯಾಗಿಯೇ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ, ಈ ಇಬ್ಬರು ಮತ್ತೆ ಜೊತೆಯಾಗಿ ತೆರೆ ಹಂಚಿಕೊಳ್ಳಬೇಕು ಎಂಬ ಕನಸು ಅಭಿಮಾನಿಗಳಲ್ಲಿ ಟಿಸಿಲೊಡೆದಿದೆ. ಈ ಆಸೆಗೆ ಸ್ವತಃ ಶಾರೂಖ್ ಮತ್ತು ಸಲ್ಮಾನ್ ಜೀವ ನೀಡಿದ್ದಾರೆ.

ಒಳ್ಳೆಯ ಕತೆಗಾರ, ಉತ್ತಮ ನಿರ್ದೇಶಕ ಸಿಕ್ಕರೆ ಈ ಇಬ್ಬರು ಖಂಡಿತಾ ಒಟ್ಟಾಗಿ ನಟಿಸುತ್ತಾರಂತೆ…! ಹೀಗಾಗಿ, ಒಳ್ಳೆಯ ಲೇಖಕರು ಮತ್ತು ನಿರ್ದೇಶಕರಿಗೆ ಇದೆ ಉತ್ತಮ ಅವಕಾಶ. ಅವಾರ್ಡ್ ಫಂಕ್ಷನ್‍ನನ್ನು ಹೋಸ್ಟ್ ಮಾಡುವ ಸಂದರ್ಭದಲ್ಲಿ ಶಾರೂಖ್ ಈ ಮಾತು ಹೇಳಿದ್ದಾರೆ. ಇದಕ್ಕೂ ಮೊದಲು ಸಲ್ಮಾನ್ ಕೂಡಾ ಇದೇ ರೀತಿಯ ಮಾತನ್ನು ಹೇಳಿದ್ದರು. ಹೀಗಾಗಿ, ಎಲ್ಲಾ ಅಂದುಕೊಂಡಂತೆ ಆದರೆ, ಇವರು ಅಂದುಕೊಂಡಂತೆ ಬರಹಗಾರ, ನಿರ್ದೇಶಕರು ಸಿಕ್ಕರೆ ಶಾರೂಖ್ ಮತ್ತು ಸಲ್ಮಾನ್‍ರನ್ನು ಒಂದೇ ತೆರೆಯಲ್ಲಿ ನೋಡಬಹುದೇನೋ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!