Friday , September 21 2018
ಕೇಳ್ರಪ್ಪೋ ಕೇಳಿ
Home / Film News / Kollywood / ಜಯ ಸಮಾಧಿ ಸ್ಥಳಕ್ಕೆ ಅಜಿತ್ ಭೇಟಿ : ಪುರುಚ್ಚಿ ತಲೈವಿಗೆ ನಮನ

ಜಯ ಸಮಾಧಿ ಸ್ಥಳಕ್ಕೆ ಅಜಿತ್ ಭೇಟಿ : ಪುರುಚ್ಚಿ ತಲೈವಿಗೆ ನಮನ

ajith ಚೆನ್ನೈ : ಮೊನ್ನೆ ವಿಧಿವಶರಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಮಾಧಿ ಸ್ಥಳಕ್ಕೆ ತಮಿಳುನಟ ಅಜಿತ್ ತನ್ನ ಪತ್ನಿ ಶಾಲಿನಿ ಜೊತೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ನಿನ್ನೆ ತಡರಾತ್ರಿ ಅಜಿತ್ ಜಯಾ ಸಮಾಧಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು.

ajith-3 ajith-4 ajith-5 ajith-6ಮರೀನಾ ಬೀಚ್‍ನಲ್ಲಿ ಎಂಜಿಆರ್ ಸಮಾಧಿ ಪಕ್ಕದಲ್ಲೇ ಜಯರ ಅಂತ್ಯಸಂಸ್ಕಾರ ನಡೆದಿತ್ತು. ಇಲ್ಲಿಗೆ ಶಾಲಿನಿ ಮತ್ತು ಅಜಿತ್ ಭೇಟಿ ನೀಡಿ ನಮನ ಸಲ್ಲಿಸಿದರು. ಅಜಿತ್ ಸದ್ಯ ಬಲ್ಗೇರಿಯಾದಲ್ಲಿ ತಮ್ಮ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಈ ಬ್ಯುಸಿ ನಡುವೆಯೂ ಅಜಿತ್ ಬಿಡುವು ಮಾಡಿಕೊಂಡು ಬಂದಿದ್ದಾರೆ. 49101893ಜಯ ತೀವ್ರ ಅಸ್ವಸ್ಥರಾಗಿದ್ದಾಗ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಅಜಿತ್ ಹೆಸರು ಮುನ್ನೆಲೆಗೆ ಬಂದಿತ್ತು. ಜಯಾ ಬರೆದಿದ್ದ ವಿಲ್‍ನಲ್ಲಿ ಅಜಿತ್ ಹೆಸರಿದೆ ಎಂಬ ಮಾತು ಕೇಳಿ ಬಂದಿತ್ತು.
ಚೋ ರಾಮಸ್ವಾಮಿಗೆ ನಮನ : ಇನ್ನು, ಜಯ ಸಮಾಧಿಗೆ ಭೇಟಿ ನೀಡಿದ ಬಳಿಕ ಅಜಿತ್ ಇವತ್ತು ಹಿರಿಯ ಚಿತ್ರನಟ ಮತ್ತು ಹಿರಿಯ ಪತ್ರಕರ್ತ ಚೋ ರಾಮಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಚೋ ರಾಮಸ್ವಾಮಿ ಇವತ್ತು ಬೆಳಗ್ಗೆ ನಿಧನರಾಗಿದ್ದು, ಅವರಿಗೂ ಅಜಿತ್ ನಮನ ಸಲ್ಲಿಸಿದ್ದಾರೆ. ಇದೂ ಅಲ್ಲದೆ, ಹಲವು ಗಣ್ಯರು ರಾಮಸ್ವಾಮಿ ಮನೆಗೆ ಭೇಟಿ ನೀಡಿ ಶೃದ್ಧಾಂಜಲಿ ಸಲ್ಲಿಸಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!