Saturday , January 19 2019
ಕೇಳ್ರಪ್ಪೋ ಕೇಳಿ
Home / Film News / ಮತ್ತೆ ಬರುತ್ತಿದೆ ಫೇಮಸ್ ಸೀರಿಯಲ್ `ಚಂದ್ರಕಾಂತ’ : ಆದರೆ, ಒಂದಲ್ಲ, ಎರಡು ಚಾನೆಲ್‍ನಲ್ಲಿ!

ಮತ್ತೆ ಬರುತ್ತಿದೆ ಫೇಮಸ್ ಸೀರಿಯಲ್ `ಚಂದ್ರಕಾಂತ’ : ಆದರೆ, ಒಂದಲ್ಲ, ಎರಡು ಚಾನೆಲ್‍ನಲ್ಲಿ!

ಮುಂಬೈ : ಚಂದ್ರಕಾಂತ ಸೀರಿಯಲ್ ನಿಮಗೆ ನೆನಪಿದ್ಯಾ…? 90ರ ದಶಕದಲ್ಲಿ ಬಹುಮನ ಗೆದ್ದ ಧಾರವಾಹಿ ಇದು. ಚಂದ್ರಕಾಂತ ಎಂಬ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಧಾರವಾಹಿ ಮಾಡಲಾಗಿತ್ತು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರವಾಹಿಯನ್ನು ಜನ ಸಾಕಷ್ಟು ಇಷ್ಟಪಟ್ಟಿದ್ದರು. ಇದೀಗ ಇದೇ ಧಾರವಾಹಿ ಮತ್ತೆ ಜನರ ಮುಂದೆ ಬರುತ್ತಿದೆ.

1994ರಲ್ಲಿ ತಯಾರಾಗಿದ್ದ ಈ ಧಾರವಾಹಿ ಇನ್ನು ಕಲರ್ ಮತ್ತು ಲೈಫ್ ಓಕೆ ವಾಹಿನಿಯಲ್ಲಿ ಹೊಸ ರೂಪದಲ್ಲಿ ಪ್ರಸಾರವಾಗಲಿದೆ. ಈ ಧಾರವಾಹಿ ವಿಚಾರದಲ್ಲಿ ಎರಡು ಚಾನೆಲ್‍ಗಳ ನಡುವೆ ಶೀತಲ ಸಮರ ಶುರುವಾಗಿದೆ. ಲೈಫ್ ಓಕೆಯಲ್ಲಿ ಪ್ರಸಾರವಾಗುವ ಈ ಧಾರವಾಹಿಯನ್ನು ನಿಖಿಲ್ ಶರ್ಮಾ ನಿರ್ಮಿಸುತ್ತಿದ್ದರೆ, ಕಲರ್ಸ್‍ನಲ್ಲಿ ಪ್ರಸಾರವಾಗುವ ಧಾರವಾಹಿಯನ್ನು ಬಾಲಾಜಿ ಟೆಲಿಫಿಲಂ ನಿರ್ಮಾಣ ಮಾಡುತ್ತಿದೆ ಎಂದು ಖ್ಯಾತ ಆಂಗ್ಲ ಮಾಧ್ಯಮ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.


ಇದು ಎರಡು ಚಾನೆಲ್‍ಗಳ ನಡುವಣ ಶೀತಲ ಸಮರವಾಗಿದ್ದು, ಎರಡೂ ಚಾನೆಲ್‍ಗಳು ಪ್ರೋಮೋ ಕೂಡಾ ಬಿಟ್ಟಿದೆ. ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ಈ ಪ್ರೋಮೊ ಬಿಡುಗಡೆ ಆಗಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!