Saturday , February 16 2019
ಕೇಳ್ರಪ್ಪೋ ಕೇಳಿ
Home / Sandalwood / ಕಿರಿಕ್ ಪಾರ್ಟಿಗೆ ಈಗ `ಶಾಂತಿ ಕ್ರಾಂತಿ’ ಟ್ಯೂನ್ ಸಂಕಷ್ಟ!

ಕಿರಿಕ್ ಪಾರ್ಟಿಗೆ ಈಗ `ಶಾಂತಿ ಕ್ರಾಂತಿ’ ಟ್ಯೂನ್ ಸಂಕಷ್ಟ!

ಬೆಂಗಳೂರು : ರಕ್ಷಿತ್ ಶೆಟ್ಟಿ ಅಭಿನಯದ `ಕಿರಿಕ್ ಪಾರ್ಟಿ’ ಚಿತ್ರಕ್ಕೆ ಸಂಕಷ್ಟ ಎದುರುಗಾಗಿದೆ. ಚಿತ್ರದಲ್ಲಿ ರವಿಚಂದ್ರನ್ ಅಭಿನಯದ `ಶಾಂತಿ ಕ್ರಾಂತಿ’ ಚಿತ್ರದ ಹಾಡಿನ ಟ್ಯೂನ್ ಬಳಸಿಕೊಳ್ಳಲಾಗಿದೆ. ಇದು ಈಗ ಚಿತ್ರಕ್ಕೆ ಕಾನೂನು ಸಂಕಷ್ಟ ತಂದಿದೆ. `ಕಿರಿಕ್ ಪಾರ್ಟಿ’ಯಲ್ಲಿ ಶಾಂತಿ ಕ್ರಾಂತಿ ಚಿತ್ರದ ಟ್ಯೂನನ್ನು ಬೇರೆ ಸಾಹಿತ್ಯಕ್ಕೆ ಬಳಸಿಕೊಳ್ಳಲಾಗಿದೆ. ಇದು ಈಗ ವಿರೋಧಕ್ಕೆ ಕಾರಣವಾಗಿದೆ.

ಶಾಂತಿ ಕ್ರಾಂತಿ ಚಿತ್ರವನ್ನು ಈಶ್ವರಿ ಕಂಬೈನ್ಸ್ ನಿರ್ಮಾಣ ಮಾಡಿತ್ತು. ಆದರೆ, ಈ ಚಿತ್ರದ ಆಡಿಯೋ ರೈಟ್ಸ್ ಲಹರಿ ಸಂಸ್ಥೆಯಲ್ಲಿ ಇದೆ. ಹೀಗಾಗಿ, ತಮ್ಮ ಅನುಮತಿ ಇಲ್ಲದೆ ಟ್ಯೂನ್ ಬಳಸಿರುವುದಕ್ಕೆ ಲಹರಿ ಸಂಸ್ಥೆ ಮುಖ್ಯಸ್ಥ ಲಹರಿ ವೇಲು ಸಿಟ್ಟಾಗಿದ್ದಾರೆ. ಅಲ್ಲದೆ, ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!