Monday , June 25 2018
ಕೇಳ್ರಪ್ಪೋ ಕೇಳಿ
Home / Sudina Special / 500 ಕೆಜಿ ಮಹಿಳೆಯ ಚಿಕಿತ್ಸೆಗೆ ಸುಷ್ಮಾ ಸ್ವರಾಜ್ ಸಹಾಯ

500 ಕೆಜಿ ಮಹಿಳೆಯ ಚಿಕಿತ್ಸೆಗೆ ಸುಷ್ಮಾ ಸ್ವರಾಜ್ ಸಹಾಯ

ನವದೆಹಲಿ : ಇಮಾನ್ ಅಹಮ್ಮದ್ ಅಬ್ದುಲತಿ ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಹೋಗಿಲ್ಲ. ತನ್ನ ತೂಕದ ಕಾರಣದಿಂದ ಇವರು ಹಾಸಿಗೆ ಬಿಟ್ಟು ಇವರು ಕದಲಲಿಲ್ಲ. ಯಾಕೆಂದರೆ ಇವರ ತೂಕವೇ ಬರೋಬ್ಬರಿ 500 ಕೆಜಿ. 36 ವರ್ಷದ ಈ ಈಜಿಪ್ಟ್‍ನ ಮಹಿಳೆ ವಿಶ್ವದ ಅತೀ ತೂಕದ ಮಹಿಳೆಯ ಸಾಲಿನಲ್ಲಿ ನಿಲ್ಲುವವರು. ಆದರೆ, ಇವರ ಈ ಸಮಸ್ಯೆಯ ಪರಿಹಾರಕ್ಕಾಗಿ ಇವರ ಸಹೋದರಿ ಎಲ್ಲರ ಬಳಿಯೂ ಸಹಾಯ ಕೇಳುತ್ತಿದ್ದರು. ಕಡೆಗೂ ಇವರಿಗೆ ಈ ಸಹಾಯ ಸಿಕ್ಕಿದೆ. ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಇಮಾನ್ ಅವರ ಸಹಾಯಕ್ಕೆ ಬಂದಿದ್ದಾರೆ.

obese_woman_2ಮುಂಬೈ ಮೂಲದ ಉದ್ಯಮಿ ಮುಫ್ತಿ ಲಕ್ಡಾವಾಲಾ ಈ ಮಹಿಳೆಯ ಸಮಸ್ಯೆಯನ್ನು ಸುಷ್ಮಾ ಸ್ವರಾಜ್ ಅವರ ಗಮನಕ್ಕೆ ತಂದಿದ್ದರು. ಅಲ್ಲದೆ, ಭಾರತಕ್ಕೆ ಚಿಕಿತ್ಸೆಗೆಂದು ಬರಲು ಅನುವು ಮಾಡಿಕೊಡಬೇಕು ಎಂದು ಮನವಿಯನ್ನೂ ಮಾಡಿದ್ದರು. ಈ ಮನವಿಗೆ ಸ್ವರಾಜ್ ತಕ್ಷಣ ಸ್ಪಂದಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಮಾನ್ ಅವರಿಗೆ ಮೆಡಿಕಲ್ ವೀಸಾ ಸಿಕ್ಕಿದೆ.

About sudina

Check Also

ಜೆಸಿಬಿಯಲ್ಲಿ ವಧುವರರ ಮೆರವಣಿಗೆ : ವೈರಲ್ ಆಯ್ತು ವೀಡಿಯೋ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮದುವೆ ವೀಡಿಯೋವೊಂದು ಈಗ ವೈರಲ್ ಆಗಿದೆ. ಸಾಮಾನ್ಯವಾಗಿ ಮದುಮಕ್ಕಳನ್ನು ಕಾರಿನಲ್ಲಿ …

Leave a Reply

Your email address will not be published. Required fields are marked *

error: Content is protected !!