Thursday , April 19 2018
Home / Sandalwood / ದಾಂಪತ್ಯ ಜೀವನಕ್ಕೆ ಯಶ್ – ರಾಧಿಕಾ : ಪ್ರಕೃತಿ ಸಾಕ್ಷಿಯಂತೆ ಮದುವೆ

ದಾಂಪತ್ಯ ಜೀವನಕ್ಕೆ ಯಶ್ – ರಾಧಿಕಾ : ಪ್ರಕೃತಿ ಸಾಕ್ಷಿಯಂತೆ ಮದುವೆ

ಬೆಂಗಳೂರು : ಸ್ಯಾಂಡಲ್‍ವುಡ್‍ನ ಮೋಹಕ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ದಿ ತಾಜ್ ವೆಸ್ಟ್ ಎಂಡ್ ಹೊಟೇಲ್‍ನಲ್ಲಿ ಇವರಿಬ್ಬರ ಮದುವೆ ನಡೆದಿದೆ. ಕಲಾ ನಿರ್ದೇಶಕ ಅರುಣ್ ಸಾಗರ್ ಕಲ್ಪನೆಯಲ್ಲಿ ಮೂಡಿ ನಿರ್ಮಾಣವಾದ ಭವ್ಯ ವೇದಿಕೆಯಲ್ಲಿ ಈ ಇಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದರು. ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಜಿತ್ ಲಗ್ನದಲ್ಲಿ 12.37ಕ್ಕೆ ಸತಿಪತಿಗಳಾದರು. ಚಿತ್ರರಂಗದ ಹಲವು ಗಣ್ಯರು ನವಜೋಡಿಗೆ ಶುಭ ಹಾರೈಸಿದರು.

yash-wedding-main-2 yash-wedding-main-1ಕಿರುತೆರೆಯಲ್ಲಿ ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಬಳಿಕ ಮೊಗ್ಗಿನ ಮನಸ್ಸು, ಡ್ರಾಮಾ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಮತ್ತು ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು.

ರಾಧಿಕಾ ಕನಸಿನಂತೆ ಸೋಮನಾಥಪುರದ ಸೋಮನಾಥೇಶ್ವರ ದೇವಾಲಯವನ್ನು ಹೋಲುವ ಅದ್ಧೂರಿ ಸೆಟ್‍ನಲ್ಲಿ ನಿರ್ಮಿಸಲಾಗಿತ್ತು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!