Friday , June 22 2018
ಕೇಳ್ರಪ್ಪೋ ಕೇಳಿ
Home / Film News / Bollywood / 15ನೇ ವಯಸ್ಸಿನಲ್ಲಿ ಸೆಟ್‍ನಲ್ಲೇ ನಟನಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದರಂತೆ ನಟಿ ರೇಖಾ…!

15ನೇ ವಯಸ್ಸಿನಲ್ಲಿ ಸೆಟ್‍ನಲ್ಲೇ ನಟನಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದರಂತೆ ನಟಿ ರೇಖಾ…!

ಮುಂಬೈ : ಬಾಲಿವುಡ್‍ನಲ್ಲಿ ರೇಖಾ ಚಿರಯೌವನೆಯೆಂದೇ ಖ್ಯಾತಿ… ಆದರೆ, ಈ ಚಿರಯೌವನೆ ಚಿತ್ರರಂಗದಲ್ಲಿ ಬಾಲ್ಯದಲ್ಲೇ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ…! ನಟ ಮತ್ತು ನಿರ್ದೇಶಕರು ಸೇರಿ ಉಪಾಯವಾಗಿ ರೇಖಾರನ್ನು ಕಾಡಿದ್ದಾರೆ. ಆದರೆ, ಪಾಪ ಆಗ ರೇಖಾಗೆ ಇದರ ಅರಿವೇ ಆಗಿರಲಿಲ್ಲ…!

ಈ ಘಟನೆ ಮತ್ತೆ ನೆನಪಾಗಲು ಕಾರಣ ಚಿತ್ರ ನಿರ್ಮಾಪಕ ನಿಖಿತಾ ದೇಶ್‍ಪಾಂಡೆ. ಯಾಸಿರ್ ಹುಸ್ಮಾನ್ ಅವರ ಬರೆದಿರುವ `ರೇಖಾ : ದಿ ಅನ್‍ಟೋಲ್ಡ್ ಸ್ಟೋರಿ’ಯ ಪುಟವನ್ನು ಉಲ್ಲೇಖಿಸಿರುವ ದೇಶಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಾಕಿದ್ದಾರೆ. ಇದು `ಅಂಜನಾ ಸಫಾರ್’ ಚಿತ್ರದ ಶೂಟಿಂಗ್ ಸಂದರ್ಭ. ಇದರಲ್ಲಿ ರೇಖಾ ಮತ್ತು ಬಿಸ್ವಾಜಿತ್ ಚಟರ್ಜಿ ನಟಿಸುತ್ತಿದ್ದರು. ಆಗ ರೇಖಾಗೆ ವಯಸ್ಸು ಬರೀ 15. ಬಿಸ್ವಾಜಿತ್ ಚಟರ್ಜಿಗೆ ಆಗ 30 ವರ್ಷ. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ರೇಖಾರನ್ನು ಬಲವಂತವಾಗಿ 5 ನಿಮಿಷ ಕಿಸ್ ಮಾಡಲಾಗಿದೆ…! ಇದು `ರೇಖಾ : ದಿ ಅನ್‍ಟೋಲ್ಡ್ ಸ್ಟೋರಿ’ ಪುಸ್ತಕದಲ್ಲಿ ಉಲ್ಲೇಖವಾಗಿದೆ. ನಟ ಚಟರ್ಜಿ ಮತ್ತು ನಿರ್ದೇಶಕ ರಾಜ ನಾವ್ತೇ ನಡುವೆ ಒಪ್ಪಂದ ಮಾಡಿಕೊಂಡು ಹೀಗೆ ಮಾಡಲಾಗಿತ್ತಂತೆ…!
rekha-2ಆ ಪುಟದಲ್ಲಿ ಏನಿದೆ…? : `ಅಂಜನಾ ಸಫರ್’ ಚಿತ್ರದ ಶೂಟಿಂಗ್ ಬಾಂಬೆಯ ಮೆಹಬೂಬ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ರಾಜಾ ನಾವ್ತೇ ಈ ಚಿತ್ರದ ನಿರ್ದೇಶಕ ಮತ್ತು ಕ್ಯಾಮೆರಾಮನ್. ಆ ದಿನ ರೇಖಾ ಮತ್ತು ಬಿಸ್ವಾಜಿತ್ ನಡುವೆ ರೊಮ್ಯಾನ್ಸ್ ಸೀನ್‍ನ ಶೂಟಿಂಗ್ ನಡೆಯುತ್ತಿತ್ತು. ಈ ಶೂಟಿಂಗ್ ಸಂದರ್ಭದಲ್ಲಿ ರಾಜಾ ಮತ್ತು ಬಿಸ್ವಾಜಿತ್ ಮಾಡಿದ್ದ `ಸ್ಟ್ಯಾಸ್ಟರ್ಜಿ’ಯಂತೆ ಶೂಟಿಂಗ್ ಮಾಡಲಾಗಿತ್ತು. ಇದು ರೇಖಾಗೆ ಗೊತ್ತಿರಲಿಲ್ಲ…! ನಿರ್ದೇಶಕ ರಾಜಾ `ಆ್ಯಕ್ಷನ್’ ಎಂದ ತಕ್ಷಣ ಬಿಸ್ವಾಜಿತ್ ರೇಖಾರನ್ನು ಜೋರಾಗಿ ಬರಸೆಳೆದು ತುಟಿಗೆ ಬಲವಂತವಾಗಿ ಮುತ್ತಿಕ್ಕಿದರು. ಸುಮಾರು 5 ನಿಮಿಷ…! ರೇಖಾಗೆ ಏನು ಆಗ್ತಿದೆ ಎಂದೇ ಗೊತ್ತಿರಲಿಲ್ಲ… ಯಾಕೆಂದರೆ, ಸೀನ್‍ನ ವಿವರಿಸುವಾಗ ಈ ಕಿಸ್‍ನ ಬಗ್ಗೆ ರೇಖಾಗೆ ಹೇಳಿಯೇ ಇರಲಿಲ್ಲ…! ಆದರೆ, ಬಿಸ್ವಾಜಿತ್ ಕಿಸ್ ಕೊಡುವಾಗ ಕ್ಯಾಮೆರಾ ರೋಲ್ ಆಗಿಯೇ ಇತ್ತು. `ಆ್ಯಕ್ಷನ್’ ಎಂದು ಹೇಳಿದ್ದ ಡೈರೆಕ್ಟರ್ ಕೂಡಾ `ಕಟ್’ ಹೇಳಿರಲಿಲ್ಲ. ಸುಮಾರು ಐದು ನಿಮಿಷಗಳ ಈ ಕಿಸ್ ಕಂಡು ಯುನಿಟ್‍ನಲ್ಲಿದ್ದ ಹುಡುಗರು ಶಿಲ್ಲೆ, ಚಪ್ಪಾಳೆ ಹೊಡೆದು ಕೇಕೆ ಹಾಕಿದರು. ರೇಖಾ ನೋವಿನಿಂದ ಕಣ್ಣೀರಿಟ್ಟಿದ್ದರು… ಅದನ್ನು ಯಾರೂ ನೋಡಿಯೇ ಇರಲಿಲ್ಲ…
rekhaಬಿಸ್ವಾಜಿತ್ ಹೇಳಿದ್ದು… : ಆ ದಿನವನ್ನು ಮತ್ತೆ ನೆನಪಿಸಿಕೊಂಡಿರುವ ಬಿಸ್ವಾಜಿತ್ ಇದು ನಿರ್ದೇಶಕ ರಆಜಾ ನಾವ್ತೇ ಉಪಾಯ ಎಂದು ಹೇಳಿದ್ದಾರೆ. ರೇಖಾಗೆ ಮುತ್ತಿಕ್ಕುವಂತೆ ರಾಜಾ ನನಗೆ ಹೇಳಿದ್ದರು ಎಂಬುದು ಬಿಸ್ವಾಜಿತ್ ಮಾತು. ಇದರಲ್ಲಿ ನನ್ನದೇನು ತಪ್ಪಿಲ್ಲ. ನಿರ್ದೇಶಕ ಹೇಳಿದ್ದನ್ನು ಮಾಡುವುದು ನಟನ ಕರ್ತವ್ಯ ಅಂತಾರೆ ಇವರು. `ಇದು ನನ್ನ ಖುಷಿಗೆ ಮಾಡಿದ್ದಲ್ಲ. ಚಿತ್ರಕ್ಕೆ ಇದು ಅಗತ್ಯ ಇತ್ತು. ರೇಖಾ ಮಾತ್ರ ಇದನ್ನು ದ್ರೋಹ ಎಂದು ತಿಳಿದುಕೊಂಡಿದ್ದಾರೆ’ ಅಂತಾರೆ ಬಿಸ್ವಾಜಿತ್…

ಏನೇ ಆದರೂ ಇದು ಸ್ಟ್ಯಾಟರ್ಜಿ ಅಂತೂ ಸತ್ಯ. ಆದರೆ, ರೇಖಾ ಮಾತ್ರ ಆ ಕ್ಷಣ ಎಷ್ಟು ನೊಂದಿರಬೇಕು ಎಂಬುದು ಅವರಿಗೆ ಮಾತ್ರ ಗೊತ್ತು…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!