ಇತ್ತೀಚೆಗೆ ಬಿಡುಗಡೆಯಾದ 2000 ರೂಪಾಯಿ ಹೊಸ ನೋಟಿನ ಬಗ್ಗೆ ಅನೇಕ ಕುತೂಹಲ ಇತ್ತು. ಆರಂಭದಲ್ಲಿ ಈ ನೋಟಿನಲ್ಲಿ ನ್ಯಾನೋ ಜಿಪಿಎಸ್ ಚಿಪ್ ಇದೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಮತ್ತೆ ಇಂತಹದ್ದೇ ಕೌತುಕಮಯ ಸುದ್ದಿಗೆ ಈ ಹೊಸ ನೋಟು ವಸ್ತುವಾಗಿದೆ.
2000 ರೂಪಾಯಿ ನೋಟಿನ ಸಹಾಯದಿಂದ ಎಲ್ಇಡಿ ಬಲ್ಬ್ ಉರಿಸುವ ವೀಡಿಯೋವೊಂದು ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಸೂರ್ಯನ ಬೆಳಕಿನಲ್ಲಿ ಈ ನೋಟನ್ನು 30 ಸೆಕೆಂಡ್ಗಳಷ್ಟು ಕಾಲ ಹಿಡಿದು ಅದರ ಸೆಕ್ಯೂರಿಟಿ ಥ್ರೆಡ್ಗೆ ವೈಯರ್ಗಳನ್ನು ತಾಗಿಸಿದಾಗ ಎಲ್ಇಡಿ ಬಲ್ಬ್ ಉರಿಯುತ್ತದೆ. ಇದೇ ವೀಡಿಯೋ ಈಗ ವೈರಲ್ ಆಗಿರುವುದು.