Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ನಾನೆಂದೂ ಪಾಕಿಸ್ತಾನ ಕಲಾವಿದರೊಂದಿಗೆ ನಟಿಸಲ್ಲ : ರಾಜ್‍ಠಾಕ್ರೆಗೆ ಶಾರೂಖ್ ಖಾನ್ ಭರವಸೆ

ನಾನೆಂದೂ ಪಾಕಿಸ್ತಾನ ಕಲಾವಿದರೊಂದಿಗೆ ನಟಿಸಲ್ಲ : ರಾಜ್‍ಠಾಕ್ರೆಗೆ ಶಾರೂಖ್ ಖಾನ್ ಭರವಸೆ

ಮುಂಬೈ : ಇನ್ನು ಮುಂದೆ ಪಾಕಿಸ್ತಾನದ ಕಲಾವಿದರೊಂದಿಗೆ ನಟಿಸಲ್ಲ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಎಂಎನ್‍ಎಸ್ ಮುಖ್ಯಸ್ಥ ರಾಜ್‍ಠಾಕ್ರೆಗೆ ಭರವಸೆ ನೀಡಿದ್ದಾರಂತೆ… ಹೀಗಂತ ಎಂಎನ್‍ಎಸ್ ಹೇಳಿದೆ.

raees-trailer-srk-759ವಿವಾದಾತ್ಮಕ ಹೇಳಿಕೆ ಕೊಟ್ಟು ಚಿತ್ರದ ಗಳಿಕೆಯಲ್ಲಿ ಭಾರೀ ಹೊಡೆತ ಅನುಭವಿಸಿದ್ದ ಶಾರೂಖ್ ಖಾನ್ ಮುಂದಿನ ಚಿತ್ರದ ವಿಚಾರದಲ್ಲಿ ತುಂಬಾ ಜಾಗರೂಕತೆಯ ಹೆಜ್ಜೆ ಇಟ್ಟಿದ್ದಾರೆ. ತಮ್ಮ `ರಾಯಿಸ್’ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಶಾರೂಖ್ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ರಾಯಿಸ್‍ನಲ್ಲಿ ಪಾಕಿಸ್ತಾನದ ನಟಿ ಮಹಿರಾ ಖಾನ್ ನಟಿಸುತ್ತಿದ್ದಾರೆ. ಆದರೆ, ಮಹಿರಾ ಈ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದು ಭಾರೀ ಪ್ರತಿಭಟನೆಯ ಸಾಧ್ಯತೆಯನ್ನು ಹುಟ್ಟು ಹಾಕಿತ್ತು. ಹೀಗಾಗಿ, ಇದೆಲ್ಲಾ ಬರೀ ವದಂತಿ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಸಲುವಾಗಿ ಶಾರೂಖ್ ಇವತ್ತು ಎಂಎನ್‍ಎಸ್ ಮುಖಂಡ ರಾಜ್ ಠಾಕ್ರೆ ಮನೆಗೆ ಭೇಟಿ ನೀಡಿದ್ದರು. ಅಲ್ಲದೆ, ಮಹಿರಾ ತಮ್ಮ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲ ಎಂಬುದನ್ನು ಶಾರೂಖ್ ಸ್ಪಷ್ಟಪಡಿಸಿದ್ದಾರೆ.

sharuk-khan-1ಉರಿಯಲ್ಲಿ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಕಲಾವಿದರ ಬಗ್ಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಬಾಲಿವುಡ್ ಇಬ್ಭಾಗವಾಗಿತ್ತು. ಹಿಂದೂಪರ ಸಂಘಟನೆಗಳು ಪಾಕಿಸ್ತಾನ ಕಲಾವಿದರು ಭಾರತದ ಚಲನಚಿತ್ರದಲ್ಲಿ ನಟಿಸಬಾರದು ಎಂದು ಆಗ್ರಹಿಸಿದ್ದರು. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಪರಿಣಾಮ ಮತ್ತು ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಅಭಿನಯಿಸಿದ ಕಾರಣ ರಣಬೀರ್ ಕಪೂರ್ ಅಭಿನಯದ `ಏ ದಿಲ್ ಹೇ ಮುಷ್ಕಿಲ್’ ಚಿತ್ರದ ಬಿಡುಗಡೆಗೆ ಎಂಎನ್‍ಎಸ್ ಅಡ್ಡಿ ಮಾಡಿತ್ತು. ಅಲ್ಲದೆ, ಚಿತ್ರ ಬ್ಯಾನ್ ಮಾಡುವಂತೆ ಆಗ್ರಹಿಸಿತ್ತು. ಚಿತ್ರ ಮಂದಿರ ಮಾಲಿಕರಿಗೂ ಬೆದರಿಕೆ ಹಾಕಿತ್ತು.

sharuk-khan-2ಇನ್ನು, ಉರಿ ದಾಳಿ ಬಳಿಕ ಬಹುತೇಕ ಕಲಾವಿದರು ಕೂಡಾ ಪಾಕಿಸ್ತಾನ ಕಲಾವಿದರೊಂದಿಗೆ ನಟಿಸಲ್ಲ ಎಂದೇ ಹೇಳಿದ್ದರು. ಇದಕ್ಕೆ ಸರಿಯಾಗಿ ಈಗ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡದ ಶಾರೂಖ್ ಖಾನ್ ಎಂಎನ್‍ಎಸ್ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಎಂಎನ್‍ಎಸ್ ಹೇಳಿದ್ದು : ಇನ್ನು, ಶಾರೂಖ್ ಇನ್ನು ಮುಂದೆ ತಾನು ಪಾಕಿಸ್ತಾನ ಕಲಾವಿದರೊಂದಿಗೆ ನಟಿಸಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಎಂಎನ್‍ಎಸ್ ಹೇಳಿದೆ. ರಾಯಿಸ್ ಚಿತ್ರದ ಪ್ರಚಾರಕ್ಕಾಗಿ ಮಹಿರಾರನ್ನು ಕರೆತರುವುದಿಲ್ಲ ಮತ್ತು ಮುಂದೆಂದೂ ಪಾಕಿಸ್ತಾನ ಕಲಾವಿದರೊಂದಿಗೆ ನಟಿಸಲ್ಲ ಎಂದು ಶಾರೂಕ್ ಹೇಳಿದ್ದಾಗಿ ಎಂಎನ್‍ಎಸ್ ತಿಳಿಸಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!