Monday , February 19 2018
Home / Film News / Bollywood / `ದಂಗಾಲ್’ ಬಾಕ್ಸ್ ಆಫೀಸ್‍ನಲ್ಲಿ ಎಷ್ಟು ಗಳಿಸಬಹುದು…? : ಅಮೀರ್ ಉತ್ತರ ಕೇಳಿದರೆ ಅಚ್ಚರಿ ಆಗುತ್ತದೆ
Buy Bitcoin at CEX.IO

`ದಂಗಾಲ್’ ಬಾಕ್ಸ್ ಆಫೀಸ್‍ನಲ್ಲಿ ಎಷ್ಟು ಗಳಿಸಬಹುದು…? : ಅಮೀರ್ ಉತ್ತರ ಕೇಳಿದರೆ ಅಚ್ಚರಿ ಆಗುತ್ತದೆ

ಮುಂಬೈ : ದಂಗಾಲ್ ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ. 2016ರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ ಚಿತ್ರವಿದು. ಡಿಸೆಂಬರ್ 23ರಂದು ಈ ಚಿತ್ರ ರಿಲೀಸ್ ಆಗಲಿದೆ. ಆದರೆ, ಎಲ್ಲರೂ ಈ ಚಿತ್ರ ದಾಖಲೆ ಬರೆಯಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ, ಅಚ್ಚರಿ ಆಗಬಹುದು, ಅಮೀರ್‍ಗೆ ಈ ರೀತಿಯ ಯಾವುದೇ ನಿರೀಕ್ಷೆ ಇಲ್ಲ…!

`ನಾನು ನನ್ನ ಚಿತ್ರ ಹೆಚ್ಚು ಗಳಿಕೆ ಮಾಡಬೇಕು ಎಂಬ ನಿರೀಕ್ಷೆ ಇಟ್ಟುಕೊಂಡವನೇ ಅಲ್ಲ. ಜನ ನನ್ನ ಚಿತ್ರಗಳನ್ನು ಮೆಚ್ಚಿದರೆ ಸಾಕು. ಇತ್ತೀಚಿನ ದಿನಗಳಲ್ಲಿ ಕೆಲವರು ಚಿತ್ರದ ಗಳಿಕೆಯ ಮೊತ್ತವನ್ನೇ ಬದಲಾಯಿಸುತ್ತಾರೆ. ಆದರೆ, ಚಿತ್ರರಂಗದಲ್ಲಿ ಇರುವ ಎಲ್ಲರಿಗೂ ನಿಜ ಏನು ಎಂಬುದು ಗೊತ್ತಿದೆ. ನಾನು ಯಾವತ್ತೂ ಇಂತಹ ಸುಳ್ಳು ಲೆಕ್ಕವನ್ನು ಕೊಟ್ಟಿಲ್ಲ. ನಿಮಗೆ ನೆನಪಿರಬಹುದು. ತಲಾಶ್ ಚಿತ್ರ ಗಳಿಸಿದ್ದು 95 ಕೋಟಿ. ಆದರೆ, ಈ ಚಿತ್ರ 100 ಕೋಟಿಯ ಗಡಿ ದಾಟಬೇಕು ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ. ನಾವು ಈ ಚಿತ್ರದಲ್ಲಿ ಬರೀ 75 ಕೋಟಿ ಬಂದರೆ ಸಾಕು ಎಂದಿದ್ದೇವು. ಆದರೆ, 95 ಕೋಟಿ ನಮಗೆ ಬೋನಸ್ ಅಷ್ಟೇ. ಹಾಗೆಯೇ ದಂಗಾಲ್. ಈ ಚಿತ್ರಕ್ಕೆ ಸುಮಾರು 70 ಕೋಟಿ ಖರ್ಚಾಗಿದೆ. ಹೀಗಾಗಿ, ಕಡೇ ಪಕ್ಷ ಇಷ್ಟಾದರೂ ಚಿತ್ರ ಗಳಿಸಬಹುದು ಎಂಬ ವಿಶ್ವಾಸ ನಮಗಿದೆ’ ಎಂಬುದು ಅಮೀರ್ ಮಾತು.

ನಿಜಕ್ಕೂ ಅಚ್ಚರಿ ಆಗುತ್ತದೆ ಅಮೀರ್ ಮಾತು. ಆದರೂ ಕೂಡಾ ಚಿತ್ರರಂಗದ ವಿಶ್ಲೇಷಕರು ಈ ಚಿತ್ರ ಇದಕ್ಕಿಂತಲೂ ಹೆಚ್ಚು ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!