Sunday , April 22 2018
Home / Film News / Bollywood / ಬಂಗ್ಲೆಗಾಗಿ ಮರಗಳ ಮಾರಣಹೋಮ : ಕಾಮಿಡಿಯನ್ ಕಪಿಲ್ ಶರ್ಮಾ ವಿರುದ್ಧ ಎಫ್‍ಐಆರ್

ಬಂಗ್ಲೆಗಾಗಿ ಮರಗಳ ಮಾರಣಹೋಮ : ಕಾಮಿಡಿಯನ್ ಕಪಿಲ್ ಶರ್ಮಾ ವಿರುದ್ಧ ಎಫ್‍ಐಆರ್

ಮುಂಬೈ : ಕಾಮಿಡಿಯನ್ ಕಪಿಲ್ ಶರ್ಮಾ ಈಗ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ತಮ್ಮ ಬಂಗಲೆಯ ಪಕ್ಕದಲ್ಲಿದ್ದ ಹಲವಾರು ಮರಗಳನ್ನು ಕಡಿದ ತಪ್ಪಿಗಾಗಿ ಕಪಿಲ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪರಿಸರ ರಕ್ಷಣೆ ಕಾಯ್ದೆ ಮತ್ತು ಎಂಆರ್‍ಟಿಪಿ ಕಾಯ್ದೆಯಡಿ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮರಗಳನ್ನು ಕಡಿದದ್ದೇ ಅಲ್ಲದೆ, ಅಲ್ಲೇ ಅಕ್ರಮವಾಗಿ ಕಟ್ಟಡ ಕಟ್ಟಿದ ಆರೋಪ ಕೂಡಾ ಶರ್ಮಾ ಮೇಲೆ ಇದೆ.

kapil-sharma-2ಕಳೆದ ಸೆಪ್ಟೆಂಬರ್‍ನಲ್ಲಿ ಕಪಿಲ್ ವಿವಾದಕ್ಕೆ ಗುರಿಯಾಗಿದ್ದರು. ಬಿಎಂಸಿ ಅಧಿಕಾರಿಗಳು ತನ್ನಿಂದ 5 ಲಕ್ಷ ಲಂಚ ಕೇಳುತ್ತಿದ್ದರು ಎಂದು ಆರೋಪ ಮಾಡಿದ್ದರು. ಇದಾದ ಬಳಿಕ ಪ್ರಧಾನ ಮಂತ್ರಿ ಮೋದಿ ಅವರಿಗೂ ಈ ಬಗ್ಗೆ ಟ್ವಿಟ್ ಮಾಡಿದ್ದರು. ಇದಕ್ಕೂ ಮೊದಲು, ಎಂಎನ್‍ಎಸ್ ಪ್ರಧಾನ ಕಾರ್ಯದರ್ಶಿ ಶಾಲಿನಿ ಠಾಕ್ರೆ ಶರ್ಮಾರ ಅಂಧೇರಿಯ ಬಂಗ್ಲೆಯಲ್ಲಿ ಅಕ್ರಮವಾಗಿ ಮಹಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!