Friday , October 19 2018
ಕೇಳ್ರಪ್ಪೋ ಕೇಳಿ
Home / Film News / ಎದೆಗೆ ಗುಂಡು ಹಾರಿಸಿಕೊಂಡು ಕಿರುತೆರೆ ನಟ ಕಮಲೇಶ್ ಪಾಂಡೆ ಆತ್ಮಹತ್ಯೆ

ಎದೆಗೆ ಗುಂಡು ಹಾರಿಸಿಕೊಂಡು ಕಿರುತೆರೆ ನಟ ಕಮಲೇಶ್ ಪಾಂಡೆ ಆತ್ಮಹತ್ಯೆ

ಜಬಲ್‍ಪುರ್ : ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕ್ರೈಂ ಪ್ಯಾಟ್ರೋಲ್’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಮಲೇಶ್ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದ ಪಾಂಡೆ ಎದೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.
kamalesh-2 kamalesh-1 ಮಂಗಳವಾರ ಮಧ್ಯಪ್ರದೇಶದ ಜಬಲ್‍ಪುರದಲ್ಲಿರುವ ತಮ್ಮ ಹೆಂಡತಿಯ ಸಹೋದರಿ ಮನೆಯಲ್ಲಿ ಪಿಸ್ತೂಲ್‍ನಿಂದ ಎದೆಗೆ ಗುಂಡು ಹಾರಿಸಿಕೊಂಡು ಪಾಂಡೆ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಕಮಲೇಶ್‍ಪತ್ನಿಯ ಸಹೋದರಿ ಅಂಜನಿ ಚತುರ್ವೇದಿ ಕೂಡಾ ಮನೆಯಲ್ಲಿ ಇದ್ದರು ಎಂದು ಗೊತ್ತಾಗಿದೆ. ಕೆಲವು ದಿನಗಳ ಹಿಂದೆ ಇದೇ ಅಂಜಲಿ ಅವರ ಪುತ್ರಿಯ ಮದುವೆ ನಡೆದಿತ್ತು. ಆದರೆ, ಈ ಮದುವೆಗೆ ಕಮಲೇಶ್‍ಗೆ ಆಹ್ವಾನ ಇರಲಿಲ್ವಂತೆ. ಇದೇ ಕಾರಣಕ್ಕೆ ಬೇಸರಗೊಂಡಿದ್ದ ಇವರು ಅಂಜಲಿ ಮನೆಗೆ ಹೋಗಿ ಜಗಳ ಮಾಡಿಕೊಂಡು ಅಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!