Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Mollywood / ನಟಿ ಮೀರಾ ಜಾಸ್ಮಿನ್ ದಾಂಪತ್ಯದಲ್ಲಿ ಬಿರುಕು…?

ನಟಿ ಮೀರಾ ಜಾಸ್ಮಿನ್ ದಾಂಪತ್ಯದಲ್ಲಿ ಬಿರುಕು…?

ತಿರುವನಂತಪುರಂ : ಮಲಯಾಲಂ ನಟಿ ಮೀರಾ ಜಾಸ್ಮಿನ್ ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಪತಿ ಅನಿಲ್ ಜಾನ್ ಟಿಟ್ಯೂಸ್‍ರಿಂದ ವಿಚ್ಚೇದನ ಪಡೆಯಲು ಮೀರಾ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ.

malayalam-actor-meera-jasmine2014ರಲ್ಲಿ ಮೀರಾ ಅನಿಲ್‍ರನ್ನು ವಿವಾಹವಾಗಿದ್ದರು. ಮದುವೆ ಬಳಿಕ ಮೀರಾ ದುಬೈನಲ್ಲಿ ವಾಸವಾಗಿದ್ದರು. ವಿವಾಹದ ನಂತರ ಮೀರಾ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ, ಈ ವರ್ಷ `10 ಕಲ್ಪನಾಕಲ್’ ಎಂಬ ಚಿತ್ರದ ಮೂಲಕ ಮತ್ತೆ ಮೀರಾ ಬಣ್ಣ ಹಚ್ಚಿದ್ದರು. ಅದೂ ಅಲ್ಲದೆ, ಮುಂದೆ ಭಾರತದಲ್ಲೇ ತಾನು ನೆಲೆಸಿ ಚಿತ್ರರಂಗದ ತನ್ನ ಕೆಲಸದತ್ತ ಗಮನ ಕೊಡುದಕ್ಕೆ ಮೀರಾ ನಿರ್ಧಾರ ಮಾಡಿದ್ದರು. ಇದೇ ಗಂಡ ಹೆಂಡತಿ ವಿರಸಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೀರಾ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುವುದು ಗಂಡ ಅನಿಲ್‍ಗೆ ಇಷ್ಟವಿರಲಿಲ್ಲವಂತೆ. ಇದೇ ಕಾರಣಕ್ಕೆ ಪತಿ ಪತ್ನಿ ನಡುವೆ ಹಲವು ಬಾರಿ ಜಗಳವೂ ನಡೆದಿತ್ತಂತೆ. ಆದರೆ, ಈ ವಿಚಾರವಾಗಿ ಅನಿಲ್ ಆಗಲಿ, ಮೀರಾ ಆಗಲಿ ಬಾಯಿ ಬಿಟ್ಟಿಲ್ಲ.

ಗಲಾಟೆ ಮದುವೆ…! : ಇಷ್ಟಕ್ಕೂ ಮೀರಾ ಮತ್ತು ಅನಿಲ್ ಮದುವೆ ಕೂಡಾ ಬೇಡದ ವಿಚಾರದಲ್ಲೇ ಹೆಡ್‍ಲೈನ್ ಆಗಿತ್ತು. ಯಾಕೆಂದರೆ ಇವರಿಬ್ಬರ ಮದುವೆ ಸಂದರ್ಭದಲ್ಲಿ ದೊಡ್ಡ ರಾದ್ಧಾಂತವೇ ನಡೆದಿತ್ತು. ತಮ್ಮಿಬ್ಬರ ಮದುವೆಗೆ ಅನಿಲ್ ಮೊದಲ ಪತ್ನಿ ಕಡೆಯವರು ತೊಂದರೆ ಮಾಡಬಹುದು ಎಂಬ ಭಯ ಅನಿಲ್‍ಗೆ ಇತ್ತು. ಇದೇ ಕಾರಣಕ್ಕೆ ದುಬೈ ಮೂಲದ ಈ ಸಾಫ್ಟ್‍ವೇರ್ ಎಂಜಿನಿಯರ್ ಪೊಲೀಸ್ ಭದ್ರತೆಯನ್ನು ಕೇಳಿದ್ದರು. ಇದಾದ ಬಳಿಕ ರಿಜಿಸ್ಟ್ರೇಷನ್ ಕಚೇರಿಯಲ್ಲೂ ಇವರಿಬ್ಬರ ಮದುವೆ ನೊಂದಾವಣಿ ಮಾಡಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದರು. ಅನಿಲ್ ತನ್ನ ಮೊದಲ ಮದುವೆಗೆ ಸಂಬಂಧಿಸಿದ ವಿಚ್ಚೇದನ ಪತ್ರ ನೀಡಲು ವಿಫಲವಾಗಿರುವುದೇ ಇದಕ್ಕೆ ಕಾರಣವಾಗಿತ್ತು.


video courtesy : indiglamour, Vega Kannada Music and youtube

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!