Sunday , July 22 2018
ಕೇಳ್ರಪ್ಪೋ ಕೇಳಿ
Home / Sudina Special / ಇದು ವಿಶ್ವದ ಅತೀ ಹಿರಿಯ ಸೀಬರ್ಡ್ : ಈ ಹಕ್ಕಿಗೀಗ ವಯಸ್ಸು 66…!

ಇದು ವಿಶ್ವದ ಅತೀ ಹಿರಿಯ ಸೀಬರ್ಡ್ : ಈ ಹಕ್ಕಿಗೀಗ ವಯಸ್ಸು 66…!

ನ್ಯೂಯಾರ್ಕ್ : ಈ ಹಕ್ಕಿಯ ವಯಸ್ಸು ಎಷ್ಟು ಗೊತ್ತಾ…? ಬರೋಬ್ಬರಿ 66. ಇದು ವಿಶ್ವದ ಅತೀ ಹಿರಿಯ ಸೀಬರ್ಡ್. ಇದೀಗ ಮತ್ತೆ ಈ ಹಕ್ಕಿ ತನ್ನ ಸಂತಾನೋತ್ಪತ್ತಿಯ ಕಾರ್ಯದಲ್ಲಿ ತೊಡಗಿದೆ. 66ನೇ ವಯಸ್ಸಿನಲ್ಲೂ ಬಂದು ಮೊಟ್ಟೆ ಇಟ್ಟಿದೆ ಈ ಹಕ್ಕಿ…!

the-worlds-oldest-known-seabird-lays-an-egg-at-66ವಿಸ್ಡಮ್ ಎಂಬ ಕಡಲಕೋಳಿ ಇದು. ಪ್ರತಿವರ್ಷ ತನ್ನೊಂದಿಗೆ ವಲಸೆ ಬರುವ ಹಕ್ಕಿಗಳು ಇರುವ ಗೂಡಿನಲ್ಲೇ ಈ ಹಕ್ಕಿಯೂ ಪ್ರತಿವರ್ಷದಂತೆ ಈ ಬಾರಿಯೂ ಮೊಟ್ಟೆ ಇಟ್ಟಿದೆ. ಹವಾಯಿ ದ್ವೀಪಸಮೂಹದ `ಮೆಡ್ವೇ ಅಟೋಲ್ ನ್ಯಾಷನಲ್ ವೈಲ್ಡ್‍ಲೈಫ್ ರೆಫ್ಯೂಜಿ’ ಕೇಂದ್ರದ ಅಧಿಕಾರಿಗಳು ಇದನ್ನು ಸ್ಪಷ್ಟಪಡಿಸಿದ್ದಾರೆ.

ಈ ತಿಂಗಳಾರಂಭದಲ್ಲಿ ಈ ದ್ವೀಪಸಮೂಹಕ್ಕೆ ಬಂದಿರುವ ಈ ಹಿರಿಯಕ್ಕಿ ಯಶಸ್ವಿಯಾಗಿ ಮೊಟ್ಟೆ ಇಟ್ಟು ತನ್ನ ಸಂತಾನೋತ್ಪತ್ತಿ ಕಾರ್ಯವನ್ನು ಆರಂಭಿಸಿದೆ. ಇದು ಈ ಹಕ್ಕಿಗಳ ವಲಸೆ ಕೇಂದ್ರದ ಅತೀ ಹಿರಿಯ ಸದಸ್ಯೆ ಮತ್ತು ವಿಶ್ವದ ಅತೀ ಹಿರಿಯ ಹಕ್ಕಿಯೂ ಹೌದು. ಸರಿಸುಮಾರು ಮೂವತ್ತು ಲಕ್ಷ ಮೈಲು ದೂರ ಈ ಹಕ್ಕಿ ಇದುವರೆಗೆ ಹಾರಿದೆ ಎಂದು ಅಂದಾಜಿಸಲಾಗಿದೆ.


About sudina

Check Also

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ …

Leave a Reply

Your email address will not be published. Required fields are marked *

error: Content is protected !!