Thursday , February 22 2018
Home / News NOW / ಆ ಯುವತಿ ಸ್ನೇಹಿತರೊಂದಿಗೆ ರಾತ್ರಿಯಿಡೀ ಕುಡಿಯುತ್ತಾ ಕುಳಿತಿದ್ದಳು : ಬೆಳಗ್ಗೆ ಆಕೆ ಹೆಣವಾಗಿದ್ದಳು : ಯಾಕೆ? ಇಲ್ಲಿದೆ ಟ್ವಿಸ್ಟ್!

ಆ ಯುವತಿ ಸ್ನೇಹಿತರೊಂದಿಗೆ ರಾತ್ರಿಯಿಡೀ ಕುಡಿಯುತ್ತಾ ಕುಳಿತಿದ್ದಳು : ಬೆಳಗ್ಗೆ ಆಕೆ ಹೆಣವಾಗಿದ್ದಳು : ಯಾಕೆ? ಇಲ್ಲಿದೆ ಟ್ವಿಸ್ಟ್!

ಇಂದೋರ್ : ಆಕೆ ಸುಷ್ಮಾ. ವಯಸ್ಸು 35. ಪ್ರತಿದಿನ ಸಂಜೆ ಸ್ನೇಹಿತರೊಂದಿಗೆ ಸೇರಿ ಮದ್ಯ ಸೇವಿಸುವುದು ಈಕೆಯ ಅಭ್ಯಾಸ. ಆದರೆ, ಆ ಒಂದು ದಿನ ಮಾತ್ರ ಆಕೆ ತನ್ನ ಪರಮಾಪ್ತರೊಂದಿಗೆ ಆಲ್ಕೋಹಾಲನ್ನು ಹೀರಲು ನಿರ್ಧರಿಸಿದ್ದಳು. ಪಾಪ, ಇದೇ ತನ್ನ ಕಡೆಯ ಕ್ಷಣ ಎಂಬ ಸಣ್ಣ ಸುಳಿವೂ ಆಕೆಗಿರಲಿಲ್ಲ…!

girl-dead-5 girl-dead-1 girl-dead-2 ಸುಷ್ಮಾ ಮತ್ತು ಇಬ್ಬರು ಆಕೆಯ ಸ್ನೇಹಿತರು ಮದ್ಯವನ್ನು ಸ್ಥಳೀಯ ವೈನ್‍ಶಾಪ್‍ನಲ್ಲಿ ಖರೀದಿಸಿದ ಬಳಿಕ ಅಲ್ಲೇ ಇದ್ದ ಕೆರೆಯ ತಟಕ್ಕೆ ಕಾರಿನಲ್ಲಿ ಹೋಗಿದ್ದರು. ಇಡೀ ರಾತ್ರಿ ಅಲ್ಲೇ ಇವರು ಮದ್ಯವನ್ನು ಹೀರುತ್ತಾ ಕುಳಿತಿದ್ದರು. ಆದರೆ, ಒಂದು ಹಂತದಲ್ಲಿ ಸುಷ್ಮಾ ತನಗ್ಯಾಕೋ ಹುಷಾರಿಲ್ಲದಂತಾಗುತ್ತದೆ ಎಂದು ಹೇಳಿದಳು. ಹೀಗಾಗಿ, ಮೂವರೂ ಕುಡಿಯುವುದನ್ನು ನಿಲ್ಲಿಸಿದರು. ಅಲ್ಲೇ ಕಾರಿನಲ್ಲಿ ಸುತ್ತಾಡಲು ಆರಂಭಿಸಿದರು. ಅದೂ ಅಲ್ಲದೆ, ಅಲ್ಲೇ ಪಕ್ಕದ ರೆಸ್ಟೋರೆಂಟ್ ಪಕ್ಕನೂ ಕಾರನ್ನು ನಿಲ್ಲಿಸಿದರು. girl-dead-3 girl-dead-4ಆದರೆ, ಸುಷ್ಮಾ ಮೇಲೆಳಲೇ ಇಲ್ಲ. ಬಳಿಕ ಈಕೆಯನ್ನು ಕಾರಿನಲ್ಲಿ ಬಿಟ್ಟು ಆ ಇಬ್ಬರು ರೆಸ್ಟೋರೆಂಟ್‍ನಲ್ಲಿ ಊಟ ಮಾಡಿದರು. ಊಟವಾದ ಬಳಿಕ ಮತ್ತೆ ಕಾರಿನಲ್ಲಿ ಇವರ ಪಯಣ ಮುಂದುವರಿದಿತ್ತು. ಬಳಿಕ ಕಾರನ್ನು ಜಾಗದಲ್ಲಿ ನಿಲ್ಲಿಸಿ ಇವರಿಬ್ಬರು ಮುಂದಿನ ಸೀಟಿನಲ್ಲಿ ಮಲಗಿದರು. ಸುಷ್ಮಾ ಹಿಂದಿನ ಸೀಟಿನಲ್ಲಿ ಮಲಗಿಕೊಂಡಿದ್ದರು. ಬೆಳಗ್ಗೆ ಆಗುವಾಗ ಸುಷ್ಮಾ ಮೃತಪಟ್ಟಿರುವ ವಿಷಯ ಇವರಿಗೆ ತಿಳಿಯಿತು. ಹೆದರಿದ ಈ ಇಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ಕಾರನ್ನು ತಂದು ನಡೆದ ವಿಷಯವನ್ನು ಎಲ್ಲಾ ವಿವರಿಸಿದ್ದಾರೆ… ಮರಣೋತ್ತರ ಪರೀಕ್ಷೆ ನಡೆಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ…

ಆದರೆ, ಈ ಪ್ರಕರಣದಲ್ಲಿ ಹಲವು ಸಂಶಯಗಳಿವೆ. ಅದಕ್ಕೆ ಪ್ರಮುಖ ಕಾರಣ ಉಸಿರುಗಟ್ಟಿ ಸುಷ್ಮಾ ಸಾವನ್ನಪ್ಪಿದ್ದಾರೆ ಎಂಬ ಮರಣೋತ್ತರ ಪರೀಕ್ಷೆ ವರದಿ…

ಅನುಮಾನದ ಕಣ್ಣು

* ಯುವಕರೇ ಪೊಲೀಸರ ಎದುರು ಸುಳ್ಳು ಹೇಳಿರಬಹುದು
* ಯುವಕರೇ ಸುಷ್ಮಾರನ್ನು ಕೊಲೆ ಮಾಡಿ ಕತೆ ಕಟ್ಟಿರಬಹುದು
* ಮಿತಿಗಿಂತ ಜಾಸ್ತಿ ಕುಡಿದದ್ದೇ ಸುಷ್ಮಾ ಸಾವಿಗೆ ಕಾರಣವಾಗಿರಬಹುದು

ಈ ಪ್ರಮುಖ ಸಂಶಯ ಪೊಲೀಸರಿಗೂ ಕಾಡುತ್ತಿದೆ. ತನಿಖೆ ಕೂಡಾ ಮುಂದುವರಿದಿದೆ. ಆದರೆ, ಯುವಕರು ಈಗ ಹೇಳುತ್ತಿರುವ ರೀತಿಯಲ್ಲೇ ಘಟನೆಯನ್ನು ವಿವರಿಸುತ್ತಿದ್ದಾರೆ. ಹೀಗಾಗಿ, ಸತ್ಯವನ್ನು ತಿಳಿಯುವುದು ಪೊಲೀಸರಿಗೂ ಕೊಂಚ ಕಗ್ಗಂಟಾಗಿದೆ.

About sudina

Check Also

ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇನ್ನಿಲ್ಲ

ಮಂಡ್ಯ : ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಪುಟ್ಟಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆ …

Leave a Reply

Your email address will not be published. Required fields are marked *

error: Content is protected !!