Monday , April 23 2018
Home / Film News / Kollywood / ತ್ರಿಷಾ ಮತ್ತೊಂದು ವೀಡಿಯೋ ಲೀಕ್…? : ವೈರಲ್ ಆಗಿದೆ ದೃಶ್ಯ

ತ್ರಿಷಾ ಮತ್ತೊಂದು ವೀಡಿಯೋ ಲೀಕ್…? : ವೈರಲ್ ಆಗಿದೆ ದೃಶ್ಯ

ಚೆನ್ನೈ : ಕಳೆದ ಕೆಲವು ವರ್ಷಗಳ ಹಿಂದೆ ನಟಿ ತ್ರಿಷಾ ಅವರದ್ದು ಎನ್ನಲಾದ ಹಾಟ್ ವೀಡಿಯೋ ಲೀಕ್ ಆಗಿತ್ತು. ಇದು ಬಾತ್‍ರೂಮ್ ದೃಶ್ಯವಾಗಿದ್ದು ಅದು ಆಗ ವೈರಲ್ ಆಗಿತ್ತು. ಇದೀಗ ಇಂತಹದ್ದೇ ಮತ್ತೊಂದು ಸುದ್ದಿಗೆ ತ್ರಿಷಾ ವಸ್ತುವಾಗಿದ್ದಾರೆ. ತ್ರಿಷಾ ಅವರ ಹಾಟ್ ಹಾಟ್ ದೃಶ್ಯವಿರುವ ವೀಡಿಯೋ ಈಗ ಮತ್ತೆ ವೈರಲ್ ಆಗಿದೆ. ಪಡ್ಡೆಗಳ ಮೊಬೈಲ್‍ನಲ್ಲೂ ಈ ದೃಶ್ಯ ಸುಳಿದಾಡುತ್ತಿದೆ.

ಆದರೆ, ಇದು ಯಾವ ಸಂದರ್ಭದಲ್ಲಿ ತೆಗೆದ ವೀಡಿಯೋ ಎಂಬುದು ಇನ್ನೂ ನಿಗೂಢ. ಯಾಕೆಂದರೆ, ಕೆಲವರ ಪ್ರಕಾರ ಇದು ತ್ರಿಶಾ ನಟಿಸಿರುವ ಚಿತ್ರದ ದೃಶ್ಯನಾ. ಮತ್ತೆ ಕೆಲವರ ಪ್ರಕಾರ ಇದು ರಿಹರ್ಸಲ್ ದೃಶ್ಯ. ತಮಿಳು, ತೆಲುಗು ಭಾಷೆಯಲ್ಲಿ ತ್ರಿಷಾ ಬೇಡಿಕೆಯ ನಟಿ. ಹೀಗಾಗಿ, ತ್ರಿಷಾ ವೀಡಿಯೋ ಬೆಂಕಿ ರೀತಿಯಲ್ಲಿ ಹರಡುತ್ತಿದೆ. ಕೆಲವರು ಇದು ತ್ರಿಷಾ ಅವರ ತಮಿಳು ದೃಶ್ಯ ಎಂದು ಹೇಳುತ್ತಿದ್ದಾರೆ. ಆದರೆ, ಇದುವರೆಗೆ ತ್ರಿಷಾ ಕಡೆಯಿಂದಾಗಿ, ಚಿತ್ರತಂಡದಿಂದಾಗಲಿ ಯಾವುದೇ ಸ್ಪಷ್ಟನೆ ಬಂದಿಲ್ಲ. ಹೀಗಾಗಿ, ಬರೀ `ಗಾಸಿಪ್’ಗಳೇ ಹರಿದಾಡುತ್ತಿದೆ. ಇದಕ್ಕೆ ಸಂಬಂಧಪಟ್ಟವರು ಬಂದು ತಕ್ಷಣ ತಮ್ಮ ಸ್ಪಷ್ಟನೆ ನೀಡಿದ ಬಳಿಕವಷ್ಟೇ ಈ ವೀಡಿಯೋದ ಸತ್ಯಾಸತ್ಯತೆ ಹೊರಬೀಳಲಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!