Saturday , September 22 2018
ಕೇಳ್ರಪ್ಪೋ ಕೇಳಿ
Home / Sandalwood / ಈ ಸಿರಿಕಂಠಕ್ಕೀಗ 50 ವರ್ಷ : ಎಸ್‍ಪಿಬಿ ಗಾನ ಪಯಣದ ಸುವರ್ಣ ಸಂಭ್ರಮ

ಈ ಸಿರಿಕಂಠಕ್ಕೀಗ 50 ವರ್ಷ : ಎಸ್‍ಪಿಬಿ ಗಾನ ಪಯಣದ ಸುವರ್ಣ ಸಂಭ್ರಮ

ಬೆಂಗಳೂರು : ಎಸ್.ಪಿ.ಬಾಲಸುಬ್ರಹ್ಮಣ್ಯಂ… ಈ ಹೆಸರು ಕೇಳದವರಿಲ್ಲ. ಗಾನಲೋಕದಲ್ಲಿ ಎಸ್‍ಪಿ ದಂತಕತೆ. ತನ್ನ ಕಂಠಸಿರಿಯಿಂದಲೇ ಅಪಾರ ಜನರ ಮನಸು ಗೆದ್ದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ.

ಇಂತಹ ಮಹಾನ್ ಪ್ರತಿಭೆ ಸಿನಿಲೋಕಕ್ಕೆ ಬಂದು ಈಗ ಸುವರ್ಣ ಸಂಭ್ರಮ. ಸರಿಯಾಗಿ 50 ವರ್ಷಗಳ ಹಿಂದೆ ಎಸ್‍ಪಿ ಮೊದಲ ಚಿತ್ರಗೀತೆಯನ್ನು ಹಾಡಿದ್ದರು. 1966 ಡಿಸೆಂಬರ್ 15ರಂದು ಎಸ್‍ಪಿ ತೆಲುಗಿನ `ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ ಚಿತ್ರಕ್ಕೆ ಮೊದಲ ಗೀತೆ ಹಾಡಿದ್ದರು. ಇದಾದ ಬರೀ ಎಂಟು ದಿನಕ್ಕೆ ಎಸ್‍ಪಿ ಕನ್ನಡದಲ್ಲಿ ಹಾಡಿದ್ದರು. ಇದು ಎಸ್‍ಪಿ ಹಾಡಿದ ಮೊದಲ ಕನ್ನಡದ ಹಾಡು. `ನಕ್ಕರೆ ಅದೇ ಸ್ವರ್ಗ’ ಚಿತ್ರದ ಹಾಡು ಎಸ್‍ಪಿ ಹಾಡಿದ ಮೊದಲ ಕನ್ನಡ ಚಿತ್ರಗೀತೆ. ಇದಾದ ಕೆಲವೇ ದಿನಗಳಲ್ಲಿ ಎಸ್‍ಪಿ ತಮಿಳಿನ `ಇರಕೈ ಇನ್ನುಂ ಇಲಯಾ ಕಣ್ಣಿ’ ಚಿತ್ರಕ್ಕೂ ಎಸ್‍ಪಿ ಧ್ವನಿ ನೀಡಿದ್ದರು. ಬಳಿಕ ಎಸ್‍ಪಿ ಅವರ ಗಾಯನ ಪಯಣ ಮಲಯಾಲಂ ಮತ್ತು ಹಿಂದಿಗೂ ಸಾಗಿತು… ಬಳಿಕ ಎಸ್‍ಪಿ ಅದೆಷ್ಟು ಬ್ಯುಸಿ ಆದರು ಎಂದರೆ ಒಂದೇ ದಿನ ಅದೆಷ್ಟೋ ಗೀತೆಗಳನ್ನು ಇವರು ಹಾಡಿ ಮುಗಿಸಿದ್ದರು. ಇದು ದಾಖಲೆಯೂ ಆಗಿತ್ತು.

ಒಂದೇ ದಿನ ಎಸ್‍ಪಿ ದಾಖಲೆ
ಕನ್ನಡ :

ಒಂದೇ ದಿನ 21 ಗೀತೆಗೆ ಧ್ವನಿ
ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ ತನಕ ಗಾಯನ
ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದ ಗೀತೆಗಳು
1981 ಫೆಬ್ರವರಿ 8 ರಂದು ಬೆಂಗಳೂರಿನಲ್ಲಿ ನಡೆದಿದ್ದ ರೆಕಾರ್ಡಿಂಗ್

ತಮಿಳು : 19 ಗೀತೆ
ಹಿಂದಿ : 16 ಗೀತೆ

ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಎಸ್‍ಪಿಬಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಒಲಿದು ಬಂದಿವೆ. ಎಸ್‍ಪಿಬಿ ಅವರು ಹಾಡಿರುವ ಹಾಡುಗಳ ಸಂಖ್ಯೆ 45000ಕ್ಕೂ ಅಧಿಕ. ವಿವಿಧ ಭಾಷೆಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಹಾಡಿದವರು ಬಹುಶಃ ಎಸ್‍ಪಿ ಅವರ ಒಬ್ಬರೇ…
ಎಸ್‍ಪಿಬಿ ಬರೀ ಗಾಯಕರಲ್ಲ. ಸಂಗೀತ ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿಯೂ ಗಮನ ಸೆಳೆದವರು. ದಕ್ಷಿಣ ಭಾರತದ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗಗಳಲ್ಲಿ ಬಾಲಸುಬ್ರಹ್ಮಣ್ಯಂ ಅವರದ್ದು ಅದ್ವಿತೀಯ ಸಾಧನೆ.

ಎಸ್‍ಪಿಬಿ ಸಾಧನೆ

  1.     ವಿವಿಧ ಭಾಷೆಗಳಲ್ಲಿ 45,000 ಕ್ಕೂ ಹೆಚ್ಚು ಹಾಡುಗಳು
  2.     ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು
  3.     ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು
  4.     25 ಬಾರಿ ಆಂಧ್ರಪ್ರದೇಶ ಸರ್ಕಾರದ `ನಂದಿ’ ಪ್ರಶಸ್ತಿ
  5.     4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ
  6.     ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ಆ ದಿನಗಳ ನೆನಪು : ಗಾಯನ ಲೋಕದ ಮೊದಲ ದಿನಗಳನ್ನು ನೆನಪಿಸಿಕೊಂಡಿರುವ ಎಸ್‍ಪಿಬಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಲ್ಲದೆ, ಈ ಕೃತಜ್ಞತೆ ಹೇಳಲು ಈ ಒಂದು ಜನ್ಮ ಸಾಕಾಗಲ್ಲ ಎಂದೂ ಎಸ್‍ಪಿ ಹೇಳಿದ್ದಾರೆ.



video courtesy : Saregama South, Pranjith Chunda

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!