Friday , October 19 2018
ಕೇಳ್ರಪ್ಪೋ ಕೇಳಿ
Home / News NOW / ಛೀ ನಾಚಿಕೆಯಾಗಬೇಕು ಇವನಿಗೆ : ಗಂಡು ಮಗುವಾಗಲಿಲ್ಲವೆಂದು ಪತ್ನಿ, ಮಗಳಿಗೆ ಹೊಡೆದ ಹೈಕೋರ್ಟ್ ವಕೀಲ!

ಛೀ ನಾಚಿಕೆಯಾಗಬೇಕು ಇವನಿಗೆ : ಗಂಡು ಮಗುವಾಗಲಿಲ್ಲವೆಂದು ಪತ್ನಿ, ಮಗಳಿಗೆ ಹೊಡೆದ ಹೈಕೋರ್ಟ್ ವಕೀಲ!

ನವದೆಹಲಿ : ಕ್ಷಮೆ ಇರಲಿ ಈ ವೀಡಿಯೋ ಹಾಕಿದ್ದಕ್ಕೆ. ಈ ವೀಡಿಯೋ ನೋಡುವುದಕ್ಕೆನೇ ಬೇಜಾರಾಗತ್ತದೆ. ಆದರೆ, ಈ ವ್ಯಕ್ತಿಯ ಕ್ರೌರ್ಯವನ್ನು ತಿಳಿಸುವ ಸಲುವಾಗಿಯೇ ಈ ವೀಡಿಯೋವನ್ನು ನಾವಿಲ್ಲಿ ಹಾಕಿದ್ದೇವೆ. ಇದಕ್ಕೆ ಕ್ಷಮೆ ಇರಲಿ.

ಪತ್ನಿ ಮತ್ತು ಮಗಳಿಗೆ ವ್ಯಕ್ತಿಯೊಬ್ಬ ಇಲ್ಲಿ ಸರಿಯಾಗಿ ಹೊಡೆಯುತ್ತಿದ್ದಾನೆ. ಮನ ಕರಗಿಸುತ್ತದೆ ಈ ದೃಶ್ಯ. ಇಲ್ಲಿ ರಕ್ಕಸನಂತೆ ವರ್ತಿಸುವಾತ ದೆಹಲಿಯ ಹೈಕೋರ್ಟ್ ಲಾಯರ್ ಅಂತ ಹೇಳಲಾಗುತ್ತಿದೆ. ಇಲ್ಲಿ ಈ ವ್ಯಕ್ತಿ ತನ್ನ ಮಗಳನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾನೆ. ಮಗಳು ನೆಲಕ್ಕೆ ಬಿದ್ದರೂ ಲೆಕ್ಕಸಿದ ಈಗ ಅಲ್ಲೇ ಮತ್ತೆ ತನ್ನ ಕ್ರೌರ್ಯವನ್ನು ಮುಂದುವರಿಸಿದ್ದಾನೆ.

ಒಂದು ಮಾಹಿತಿ ಪ್ರಕಾರ ಈ ಕುಟುಂಬ ದೆಹಲಿಯ ವಸಂತ್ ಕುಂಜ್‍ನಲ್ಲಿ ನೆಲೆಸಿದ್ದು. ಹೊಡೆತ ತಿನ್ನುವ ಬಾಲಕಿಯ ಸಹೋದರಿ ಈ ದೃಶ್ಯವನ್ನು ಶೂಟ್ ಮಾಡಿದ್ದಾಗಿ ಗೊತ್ತಾಗಿದೆ. ಅದೂ ಅಲ್ಲದೆ, ಈತ ಕಳೆದ 15 ವರ್ಷಗಳಿಂದ ಪತ್ನಿ ಮತ್ತು ಮಗಳಿಗೆ ಹೊಡೆಯುತ್ತಿದ್ದಾನಂತೆ. ತನಗೆ ಗಂಡು ಮಗು ಆಗಲಿಲ್ಲವೆಂಬ ಕಾರಣದಿಂದಲೇ ಈ ಸದಾ ಹೊಡೆಯುತ್ತಿದ್ದ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಇನ್ನು, ಸಂತ್ರಸ್ತ ಮಹಿಳೆ ಕೂಡಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್‍ಡಿ ಟಿವಿ ವರದಿ ಮಾಡಿದೆ.

ಈ ನಡುವೆ, ಆರೋಪಿತ ವ್ಯಕ್ತಿ ಮಾತ್ರ ತನ್ನ ವಿರುದ್ಧದ ಆರೋಪ ತಳ್ಳಿ ಹಾಕಿದ್ದಾನೆ. ತನ್ನ ಆಸ್ತಿಯನ್ನು ಕಬಳಿಸುವ ಸಲುವಾಗಿಯೇ ಈ ಆರೋಪ ಮಾಡಲಾಗುತ್ತಿದೆ ಎಂಬುದು ಈತನ ವಾದ. ಏನೇ ಆದರೂ ಈ ವೀಡಿಯೋ ಮಾತ್ರ ಕರಳು ಹಿಂಡುತ್ತದೆ. ಕಣ್ಣಲ್ಲಿ ನೀರು ಬರಿಸುತ್ತದೆ…

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!