Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Bollywood / 1 ಕೆಜಿ ಹೆರಾಯಿನ್‍ನನ್ನು ಶೂ ಒಳಗಿಟ್ಟುಕೊಂಡು ವಿಮಾನದಲ್ಲಿ ಹೋಗಿದ್ದರು ಸಂಜಯ್ ದತ್…! : ಇಲ್ಲಿದೆ ದತ್ ಮಾದಕ ವ್ಯಸನಿಯಾದ ಕತೆ

1 ಕೆಜಿ ಹೆರಾಯಿನ್‍ನನ್ನು ಶೂ ಒಳಗಿಟ್ಟುಕೊಂಡು ವಿಮಾನದಲ್ಲಿ ಹೋಗಿದ್ದರು ಸಂಜಯ್ ದತ್…! : ಇಲ್ಲಿದೆ ದತ್ ಮಾದಕ ವ್ಯಸನಿಯಾದ ಕತೆ

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನ ಯಾವುದೇ ಚಿತ್ರದ ಕತೆಗಿಂತ ಭಿನ್ನವಾಗಿಲ್ಲ. ಹೀಗಾಗಿಯೇ, ರಾಜ್‍ಕುಮಾರ್ ಇರಾನಿ ದತ್ ಜೀವನ ಕತೆಯನ್ನೇ ಚಿತ್ರ ಮಾಡಲು ಹೊರಟಿದ್ದಾರೆ…! ಜೈಲು ಜೀವನ, ಹೆತ್ತವರ ಅಗಲಿಕೆ, ಸಂಕಷ್ಟದ ದಿನಗಳು ಮತ್ತು ಮಾದಕ ವ್ಯಸನ… ಹೀಗೆ ಒಂದು ಕಾಲದಲ್ಲಿ ಏನೇನೋ ಆಗಿದ್ದ ದತ್ ಈಗ ಗಟ್ಟಿ ಮನುಷ್ಯ ಆಗಿದ್ದಾರೆ… ಇವೆಲ್ಲಾ ಅಂಶಗಳು ಇರಾನಿ ಚಿತ್ರದಲ್ಲಿ ಇರಬಹುದು…

ಸಂಜಯ್ ಬಹಳ ಚಿಕ್ಕ ವಯಸ್ಸಿನಲ್ಲೇ ಮಾದಕ ವ್ಯಸನಿಯಾಗಿದ್ದರು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲೇ ದತ್‍ಗೆ ಮಾದಕ ವ್ಯಸನವಿತ್ತು. ಅದೂ ಅಲ್ಲದೆ, ತನ್ನ ತಾಯಿ ಚಿತ್ರನಟಿ ನರ್ಗಿಸ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸಂದರ್ಭ ಮತ್ತು ಮೃತಪಟ್ಟ ಸಂದರ್ಭದಲ್ಲಿ ಸಂಪೂರ್ಣ ಕುಗ್ಗಿ ಹೋಗಿದ್ದ ದತ್‍ಗೆ ಆ ಕಾಲದಲ್ಲಿ ಚಿಂತೆ ಮರೆಸಿದ್ದು ಇದೇ ಹೆರಾಯಿನ್, ಬ್ರೌನ್ ಶುಗರ್‍ಗಳೇ…! ಈ ವೇಳೆ ಸಂಜಯ್ ಬದುಕೇ ಹಾಳಾಗಿತ್ತು. ವೈಯಕ್ತಿಕ ಮತ್ತು ವೃತಿಪರ ಎರಡೂ ಕ್ಷೇತ್ರದಲ್ಲೂ ಸಂಜಯ್ ಸೋತು ಹೋಗಿದ್ದರು.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸ್ವತಃ ದತ್ ಅವರೇ ಈ ಡ್ರಗ್‍ನಿಂದಾಗಿ ತಾನೆಷ್ಟು ಹಾಳಾದೆ ಎಂಬುದನ್ನು ವಿವರಿಸಿದ್ದಾರೆ. ಅಂದು ದತ್ ಹೇಳಿದ್ದ ಮಾತಿನ ಕೆಲವು ತುಣುಕುಗಳು ಇಲ್ಲಿದೆ.

`ನನ್ನ ತಾಯಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸಂದರ್ಭದಲ್ಲೇ ನಾನು ಮಾದಕ ವ್ಯಸನಿಯಾಗಿದ್ದೆ. ನನಗಿನ್ನೂ ನೆನಪಿದೆ `ರಾಕಿ’(ದತ್ ಮೊದಲ ಚಿತ್ರ) ಚಿತ್ರದ ಸಂದರ್ಭದಲ್ಲಂತೂ ನಾನು ಸಂಪೂರ್ಣ ಡ್ರಗ್ಸ್‍ನ ದಾಸನಾಗಿದ್ದೆ. ನನ್ನ ಶೂನಲ್ಲಿ ಒಂದು ಕೆ.ಜಿ ಹೆರಾಯಿನ್ ಇಟ್ಟುಕೊಂಡು ನಾನು ಹೋಗುತ್ತಿದ್ದೆ. ಇದೇ ವಿಮಾನದಲ್ಲಿ ನನ್ನ ಇಬ್ಬರು ಸಹೋದರಿಯರೂ ಇದ್ದರು. ಆಗ ಏರ್‍ಪೋರ್ಟ್‍ನಲ್ಲಿ ತಪಾಸಣೆ ಈಗಿನಷ್ಟು ಸ್ಟ್ರಿಕ್ಟ್ ಆಗಿರಲಿಲ್ಲ. ಆದರೆ, ಈಗ ಈ ಮಾತನ್ನು ಆಡುತ್ತಿರುವಾಗಲೇ ನನಗೆ ಭಯವಾಗುತ್ತದೆ. ನಾನು ಸಿಕ್ಕಿಬಿದ್ದಿದ್ದರೆ ಪರವಾಗಿಲ್ಲ. ನನ್ನಿಬ್ಬರು ಸಹೋದರಿಯದ್ದು ಏನು ಗತಿ? ಡ್ರಗ್ಸ್ ನನ್ನ ಕೈಯಲ್ಲಿ ಇಷ್ಟೆಲ್ಲಾ ಮಾಡಿಸಿತ್ತು. ಕುಟುಂಬ ಮತ್ತು ಎಲ್ಲವನ್ನೂ ಡ್ರಗ್ಸ್‍ಗಳು ನನ್ನಿಂದ ಮರೆಸಿತ್ತು’

ಹುಡುಗಿಯರ ಭಯದಿಂದ ಮಾದಕ ವ್ಯಸನ…! : ಇಷ್ಟಕ್ಕೂ ಸಂಜಯ್ ಮಾದಕ ವ್ಯಸನಿ ಆಗಿದ್ದು ಹೇಗೆ ಎಂಬುದಕ್ಕೆ ಕಾರಣವನ್ನೂ ಕೊಡುತ್ತಾರೆ. ಸಂಜಯ್‍ಗೆ ಹುಡುಗಿಯರೊಂದಿಗೆ ಮಾತನಾಡುವುದೆಂದರೆ ಭಯವಂತೆ. ಹೀಗಾಗಿ, ಯಾರೋ ಹೇಳಿದರಂತೆ. ಡ್ರಗ್ಸ್ ಸೇವಿಸಿದರೆ ಈ ಭಯ ಹೋಗುತ್ತದೆ ಎಂದು. ಇದೇ ಕಾರಣಕ್ಕೆ ಆರಂಭವಾದ ಚಟ ಬಳಿಕ ಸಂಜಯ್ ಬದುಕನ್ನೇ ಹಾಳು ಮಾಡಿತ್ತು. ಈಗ ಸಂಜಯ್‍ಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಹೀಗಾಗಿ, ಯಾರೂ ಮಾದಕ ವ್ಯಸನಿ ಆಗಬೇಡಿ ಎಂದು ಅವರು ಹೇಳಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಸಿಗುವ ಖುಷಿಯ ಎದುರು ಇವೆಲ್ಲಾ ಏನೂ ಅಲ್ಲ ಎಂಬುದು ಸಂಜಯ್ ಮಾತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!