Monday , June 25 2018
ಕೇಳ್ರಪ್ಪೋ ಕೇಳಿ
Home / Film News / Mollywood / ಜನರಿಗೆ ವಂಚನೆ : ಮಲಯಾಳಂ ನಟಿ ಬಂಧನ

ಜನರಿಗೆ ವಂಚನೆ : ಮಲಯಾಳಂ ನಟಿ ಬಂಧನ

ತಿರುವನಂತಪುರಂ: ಮಲಯಾಳಂನ ಖ್ಯಾತ ನಟಿ ಧನ್ಯ ಮೇರಿ ವರ್ಗೀಸ್ ಈಗ ಪೊಲೀಸರ ಅತಿಥಿ. ವಂಚನೆ ಆರೋಪದಲ್ಲಿ ಧನ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಧನ್ಯ ತನ್ನ ಪತಿ ಜೊತೆ ಸೇರಿ ಸ್ಯಾಮ್ಸನ್ ಆ್ಯಂಡ್ ಸನ್ಸ್ ಎಂಬ ರಿಯಲ್ ಎಸ್ಟ್ರೇಲ್ ಕಂಪೆನಿ ನಡೆಸುತ್ತಿದ್ದರು. ಆದರೆ, ಈ ಕಂಪೆನಿಯಿಂದ ತಮಗೆ ವಂಚನೆ ಆಗಿದೆ ಎಂದು ಆರೋಪಿಸಿ 50ಕ್ಕೂ ಹೆಚ್ಚು ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಧನ್ಯ ಸೇರಿ ಮೂವರನ್ನು ಬಂಧಿಸಿದ್ದಾರೆ.
ಧನ್ಯ, ಅವರ ಪತಿ ಜಾನ್ ಜಾಕಬ್ ಮತ್ತು ಸೋದರ ಸ್ಯಾಮ್ಯುವೆಲ್ಸ್‍ರನ್ನೂ ಪೊಲೀಸರು ಬಂಧಿಸಿದ್ದಾರೆ. ಅಪಾರ್ಟ್‍ಮೆಂಟ್‍ಗಳನ್ನು ಮುಂಗಡವಾಗಿ ಕಾಯ್ದಿರಿಸುವ ವಿಚಾರದಲ್ಲಿ ವಂಚನೆ ನಡೆದಿದೆ. ಜಾಕಬ್ ತನ್ನ ಪತ್ನಿಯ ಸೆಲೆಬ್ರಿಟಿ ಇಮೇಜನ್ನು ಬಳಸಿಕೊಂಡು ಜನರಿಗೆ ವಂಚಿಸಿದ್ದ ಎಂದು ಹೇಳಲಾಗುತ್ತಿದೆ.

ತಿರುವನಂತಪುರದ ಪಟ್ಟೊಮ್ ಎಂಬಲ್ಲಿ ನೊವಾ ಕ್ಯಾಸನ್ ಫ್ಲ್ಯಾಟ್ ಗಳನ್ನು ಹಂಚಿಕೆ ಮಾಡುವುದಾಗಿ ಜನರಿಂದ ಸುಮಾರು 40 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗಳವರೆಗೆ ಇವರು ಪಡೆದಿದ್ದರು. ಆದರೆ, ಹಣ ಪಡೆದು ಹಲವು ವರ್ಷ ಆದರೂ ಇವರು ಫ್ಲ್ಯಾಟ್‍ಗಳನ್ನು ಯಾರಿಗೂ ನೀಡಿರಲಿಲ್ಲ.

ಧನ್ಯ 2006ರಲ್ಲಿ ತಮಿಳಿನಲ್ಲಿ ತಿರುಡಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಬಳಿಕ ಮಲಯಾಳಂನಲ್ಲಿ 2007ರಲ್ಲಿ ನನ್ಮಾ ಚಿತ್ರದಲ್ಲಿ ನಟಿಸಿದ್ದರು. ಧನ್ಯ ಇದುವರೆಗೆ ಸುಮಾರು 20ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು. ಇವರು ಹೆಚ್ಚು ನಟಿಸಿದ್ದು ಮಲಯಾಲಂ ಚಿತ್ರಗಳಲ್ಲಿಯೇ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!