Sunday , July 22 2018
ಕೇಳ್ರಪ್ಪೋ ಕೇಳಿ
Home / Sudina Special / ಶ್ವಾನದಳದ ನಾಯಿಗೆ ನೀರು ಕುಡಿಸಿ ಮನಗೆದ್ದ ವಿರಾಟ್ ಕೊಹ್ಲಿ

ಶ್ವಾನದಳದ ನಾಯಿಗೆ ನೀರು ಕುಡಿಸಿ ಮನಗೆದ್ದ ವಿರಾಟ್ ಕೊಹ್ಲಿ

ಚೆನ್ನೈ : ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಜಯಗಳಿಸಿದ ಖುಷಿಯಲ್ಲಿದ್ದಾರೆ. ಅಲ್ಲದೆ, ಸ್ಟೇಡಿಯಂನಲ್ಲಿ ವಿರಾಟ್ ಆಟಕ್ಕೂ ಅಭಿಮಾನಿಗಳು ಮನಸೋತಿದ್ದಾರೆ. ಕೊಹ್ಲಿ ತಂಡವನ್ನು ಮುನ್ನಡೆಸುವ ರೀತಿಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದರ ನಡುವೆ, ಕ್ರೀಡಾಂಗಣದ ಹೊರಗೆಯೂ ಕೊಹ್ಲಿ ಜನ ಮನಗೆದ್ದಿದ್ದಾರೆ.
ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಒಂದು ಹೃದಯಸ್ಪರ್ಶಿ ದೃಶ್ಯಕ್ಕೆ ಸಾಕ್ಷಿಯಾದರು. ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಶ್ವಾನದೊಂದಿಗೆ ಕೊಹ್ಲಿ ಒಂದಷ್ಟು ಖುಷಿಯ ಕ್ಷಣಗಳನ್ನು ಕಳೆದರು. ಅಲ್ಲದೆ, ನಾಯಿಗೆ ನೀರು ಕುಡಿಸಿ ಗಮನ ಸೆಳೆದರು. ಲ್ಯಾಬ್ರಡಾರ್ ಥಳಿಯ ಈ ಶ್ವಾನದೊಂದಿಗೆ ಕೆಲಹೊತ್ತು ಕಳೆದ ಕೊಹ್ಲಿ ಬಳಿಕ ತಮ್ಮ ಅಭ್ಯಾಸಕ್ಕೆ ಮರಳಿದರು.

ಇನ್ನು, ತನ್ನ ಮುದ್ದಿನ ಶ್ವಾನದೊಂದಿಗೆ ಕಳೆದ ಇತರ ಕ್ರಿಕೆಟ್ ಆಟಗಾರರ ಫೋಟೋ ಕೂಡಾ ಇಲ್ಲಿದೆ…

About sudina

Check Also

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ …

Leave a Reply

Your email address will not be published. Required fields are marked *

error: Content is protected !!