Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ನೋಟು ನಿಷೇಧ ಉತ್ತಮ ನಡೆ, ಇದನ್ನು ಎಲ್ಲರೂ ಬೆಂಬಲಿಸಬೇಕು : ಅಮೀರ್ ಖಾನ್

ನೋಟು ನಿಷೇಧ ಉತ್ತಮ ನಡೆ, ಇದನ್ನು ಎಲ್ಲರೂ ಬೆಂಬಲಿಸಬೇಕು : ಅಮೀರ್ ಖಾನ್

ಮುಂಬೈ: 500, 1000 ರೂಪಾಯಿ ನೋಟು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಡೆ ಸ್ವಾಗತಾರ್ಹ. ಇದನ್ನು ದೇಶದ ಜನ ಬೆಂಬಲಿಸಬೇಕು ಎಂದು ಬಾಲಿವುಡ್ ನಟ ಅಮೀರ್ ಖಾನ್ ಪುನರುಚ್ಛರಿಸಿದ್ದಾರೆ. ಪ್ರಧಾನಿ ಒಳ್ಳೆಯ ಹೆಜ್ಜೆಯನ್ನೇ ಇಟ್ಟಿದ್ದಾರೆ. ಆದರೆ, ಜನರು ಇದರಿಂದ ಕೊಂಚ ಕಷ್ಟ ಅನುಭವಿಸುತ್ತಿದ್ದಾರೆ ನಿಜ. ಇದರ ಬಗ್ಗೆ ನನಗೆ ಬೇಸರವಿದೆ. ಆದರೆ, ಈ ಹೆಜ್ಜೆ ಉತ್ತಮವಾಗಿದ್ದು, ಎಲ್ಲರೂ ಇದನ್ನು ಬೆಂಬಲಿಸಬೇಕು ಎಂಬುದು ಅಮೀರ್ ಮಾತು.

`ನೋಟು ನಿಷೇಧದಿಂದ ನನ್ನ ಜೀವನದಲ್ಲಿ ಯಾವುದೇ ತೊಂದರೆ ಆಗಿಲ್ಲ. ಯಾಕೆಂದರೆ, ನನ್ನ ಬಳಿ ಕಪ್ಪು ಹಣ ಇಲ್ಲ. ಕಪ್ಪು ಹಣ ಇದ್ದವರಿಗಷ್ಟೇ ತೊಂದರೆ ಆಗುತ್ತಿದೆ. ನಾನು ಕಾಲಕಾಲಕ್ಕೆ ಸರಿಯಾಗಿ ತೆರಿಗೆ ಕಟ್ಟುತ್ತಿದ್ದೇನೆ. ಜೊತೆಗೆ, ಸದ್ಯ ಕಾರ್ಡನ್ನ ಬಳಸುತ್ತಿದ್ದೇನೆ. ಹೀಗಾಗಿ, ನನಗೆ ಇದರಿಂದ ತೊಂದರೆ ಆಗಿಲ್ಲ ಎಂದು ಅಮೀರ್ ಸ್ಪಷ್ಟಪಡಿಸಿದ್ದಾರೆ.

ನೋಟು ನಿಷೇಧದ ಬಳಿಕ ಕೇಂದ್ರ ಸರ್ಕಾರ ಜನ ಡಿಜಿಟಲ್ ವಹಿವಾಟು ನಡೆಸುವುದಕ್ಕೆ ಉತ್ತೇಜನ ನೀಡುತ್ತಿದೆ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅವರಿಗೆ ಬೆಂಬಲ ನೀಡಬೇಕು ಎಂದು ಅಮೀರ್ ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!