ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿಗೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸಲಹೆ ನೀಡಿದ್ದಾರೆ. ಬಾಲಕೃಷ್ಣ ಅಭಿನಯದ `ಗೌತಮಿಪುತ್ರ ಶತಕರ್ಣಿ’ಯಂತಹ ಚಿತ್ರವನ್ನು ಚಿರಂಜೀವಿ ಮಾಡಬೇಕು ಎನ್ನುವುದು ರಾಮ್ ಮಾತು.
ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿಗಳು, ಚಿರು ಗೌತಮಿಪುತ್ರ ಶತಕರ್ಣಿ, ಬಾಹುಬಲಿಯಂತಹ ಚಿತ್ರಗಳನ್ನು ಮಾಡಬೇಕು ಎಂದು ಬಯಸುತ್ತಾರೆ. ಈ ಮೂಲಕ ಚಿರಂಜೀವಿ ತೆಲುಗು ಚಿತ್ರರಂಗವನ್ನು ಇನ್ನೊಂದು ಘಟ್ಟಕ್ಕೆ ಕೊಂಡೊಯ್ಯಬೇಕು ಎಂಬುದು ರಾಮ್ಗೋಪಾಲ್ ಸಲಹೆ. ಅಲ್ಲದೆ, ಚಿರು ಅಪ್ಪಟ ಅಭಿಮಾನಿಗಳು ಇವರಿಗೆ ಇದೇ ರೀತಿ ಒತ್ತಾಯ ಮಾಡಬೇಕು ಎಂದೂ ಕೇಳಿಕೊಂಡಿದ್ದಾರೆ.