Monday , January 22 2018
Home / Film News / Bollywood / ರಣಬೀರ್ ಕಪೂರ್ ಈಗ ಸಂಜಯ್ ದತ್…! : ಆದರೆ, ದತ್‍ಗೆ ಕಪೂರ್ ಭೇಟಿಯಾಗುವುದು ಇಷ್ಟ ಇಲ್ಲ!
Buy Bitcoin at CEX.IO

ರಣಬೀರ್ ಕಪೂರ್ ಈಗ ಸಂಜಯ್ ದತ್…! : ಆದರೆ, ದತ್‍ಗೆ ಕಪೂರ್ ಭೇಟಿಯಾಗುವುದು ಇಷ್ಟ ಇಲ್ಲ!

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನಕತೆ ಚಿತ್ರವಾಗಿ ಬರುತ್ತಿದೆ. ರಾಜ್‍ಕುಮಾರ್ ಇರಾನಿ ದತ್ ಜೀವನ ಕತೆಯನ್ನು ತೆರೆಗೆ ತರುತ್ತಿದ್ದಾರೆ. ಸ್ಕ್ರೀನ್‍ನಲ್ಲಿ ಸಂಜಯ್ ದತ್ ಪಾತ್ರದಲ್ಲಿ ಮಿಂಚಲಿರುವವರು ರಣಬೀರ್ ಕಪೂರ್. ಆದರೆ, ಸಂಜೂ ಯಾಕೋ ಸ್ವಲ್ಪ ನೊಂದಿದ್ದಾರೆ ಅಂತ ಕಾಣ್ತದೆ. ಯಾಕೆಂದರೆ, ರಣಬೀರ್ ದತ್‍ರನ್ನು ಭೇಟಿಯಾಗಲು ಬಯಸಿದರೂ ದತ್ ಯಾಕೋ ಸಮಯ ಕೊಡುತ್ತಿಲ್ಲ…

ತಮ್ಮ ಚಿತ್ರದ ಬಗ್ಗೆ ದತ್ ಯಾಕೋ ಸ್ವಲ್ಪ ಕನ್‍ಫ್ಯೂಸ್ ಆದಾಗಿದೆ. ಈ ಬಗ್ಗೆ ಸಂಜೂನೇ ಹೇಳ್ಕೊಂಡಿದ್ದಾರೆ. `ನನ್ನ ಜೀವನ ಸ್ವಲ್ಪ ಇಂಟ್ರೆಸ್ಟಿಂಗ್ ಆಗಿಯೇ ಇದೆ. ಇದೇ ಕಾರಣಕ್ಕೆ ರಾಜ್‍ಕುಮಾರ್ ಇರಾನಿ ಅವರಂಥ ನಿರ್ದೇಶಕರನ್ನೂ ನನ್ನ ಜೀವನ ಸೆಳೆದಿದೆ. ರಣಬೀರ್ ನನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪಾಪ ರಣಬೀರ್ ಸ್ಥಿತಿ ಸ್ವಲ್ಪ ಕಷ್ಟದಲ್ಲಿ ಇದೆ. ರಣಬೀರ್ ತುಂಬಾ ಸಲ ನನಗೆ ಫೋನ್ ಮಾಡ್ತಾ ಇರ್ತಾರೆ. ಅವರಿಗೆ ನನ್ನೊಂದಿಗೆ ಕೆಲದಿನ ಕಳೆಯಲು ಮನಸ್ಸಿದೆ. ಆದರೆ, ನನಗೆ ಒಬ್ಬ ವ್ಯಕ್ತಿಯೊಂದಿಗೆ ಅರ್ಧ ಗಂಟೆಗಿಂತ ಹೆಚ್ಚು ಕಾಲ ಕಳೆಯುವುದು ಸಾಧ್ಯ ಇಲ್ಲ. ಹೀಗಾಗಿ, ನಾನೇ ಆತನನ್ನು ಅವೈಡ್ ಮಾಡುತ್ತಿದ್ದೇನೆ. ರಣಬೀರ್ ಉತ್ತಮ ನಟ. ಆದರೂ, ಈ ಪಾತ್ರ ಮಾಡುವುದು ಅವರಿಗೆ ಸ್ವಲ್ಪ ಕಷ್ಟ ಆಗಬಹುದೇನೋ’ ಎಂಬುದು ಸಂಜಯ್ ದತ್ ಅಭಿಪ್ರಾಯ.

ಸಂಜಯ್ ಮಾತ್ರವಲ್ಲ. ನಿರ್ಮಾಪಕಿ ಪೂಜಾ ಭಟ್‍ಗೂ ಇದೇ ಅನುಮಾನ. ದತ್ ಪಾತ್ರವನ್ನು ನಿರ್ವಹಿಸುವುದಕ್ಕೆ ರಣಬೀರ್‍ಗೆ ಕಷ್ಟ ಆಗಬಹುದು ಎಂಬುದು ಪೂಜಾ ಮಾತು.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!