Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ಶಾರೂಖ್, ಅಮೀರ್, ಸೈಫ್ ಹಿಂದೂ ಧರ್ಮ ಸ್ವೀಕರಿಸದಿದ್ದರೆ ಕಿಡ್ನ್ಯಾಪ್ ಮಾಡಿ ಮತಾಂತರ ಮಾಡುತ್ತೇನೆ : ಸ್ವಾಮಿ ಓಂ ವೀಡಿಯೋ

ಶಾರೂಖ್, ಅಮೀರ್, ಸೈಫ್ ಹಿಂದೂ ಧರ್ಮ ಸ್ವೀಕರಿಸದಿದ್ದರೆ ಕಿಡ್ನ್ಯಾಪ್ ಮಾಡಿ ಮತಾಂತರ ಮಾಡುತ್ತೇನೆ : ಸ್ವಾಮಿ ಓಂ ವೀಡಿಯೋ

ಮುಂಬೈ : ಸ್ವಾಮಿ ಓಂ ಬಿಗ್‍ಬಾಸ್ 10ರ ಕುಖ್ಯಾತ ಸ್ಪರ್ಧಿ. ಯಾಕೆಂದರೆ, ಸ್ವಾಮಿ ಓಂ ಹಿನ್ನೆಲೆಯೇ ಅಂತಹದ್ದು. ಬರೀ ವಿವಾದಗಳಿಂದಲೇ ಸುದ್ದಿಯಾದವರು ಇವರು. ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದು ಇವರೇ, ಸೈಕಲ್ ಕದ್ದ ಆರೋಪದಲ್ಲಿ ಸ್ವತಃ ತಮ್ಮನಿಂದಲೇ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದ್ದು ಕೂಡಾ ಇದೇ ವ್ಯಕ್ತಿಯ ಮೇಲೆಯೇ…

ಹೀಗಾಗಿ, ವಿವಾದಗಳೇ ಸ್ವಾಮಿ ಓಂ ಬದುಕು. ಇದೀಗ ಇದೇ ಸ್ವಾಮಿ ಓಂ ಬಾಲಿವುಡ್ ಕಲಾವಿದರಾದ ಶಾರೂಖ್ ಖಾನ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಶರ್ಮಿಳಾ ಠಾಗೋರ್, ಕರೀನಾ ಕಪೂರ್ ಖಾನ್ ವಿರುದ್ಧ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಜನರ ಮಧ್ಯೆ ನಿಂತು ಮಾತನಾಡುವ ಸ್ವಾಮಿ ಓಂ, `ಹಿಂದೂ ಹುಡುಗಿಯರನ್ನು ಮದುವೆಯಾಗಿರುವ ಶಾರೂಖ್ ಖಾನ್, ಅಮೀರ್ ಖಾನ್ ಮತ್ತು ಸೈಫ್ ಅಲಿ ಖಾನ್ ಹಿಂದೂ ಧರ್ಮವನ್ನು ಸ್ವೀಕರಿಸಬೇಕು. ಇದು ಸಾಧ್ಯವಾಗದೇ ಇದ್ದರೆ ಇವರೆಲ್ಲದನ್ನೂ ಕಿಡ್ನ್ಯಾಪ್ ಮಾಡಿ ಹಿಂದೂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿಸುತ್ತೇನೆ’ ಎಂಬಂತಹ ಮಾತನ್ನು ಹೇಳುವ ವೀಡಿಯೋ ಇದು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!