Friday , April 20 2018
Home / Sandalwood / ಸೂರಿಗಾಗಿ ಆದಿವಾಸಿಗಳ ಪ್ರತಿಭಟನೆ : ಸಂತ್ರಸ್ತರ ಪರ ನಟ ಚೇತನ್ ಧರಣಿ

ಸೂರಿಗಾಗಿ ಆದಿವಾಸಿಗಳ ಪ್ರತಿಭಟನೆ : ಸಂತ್ರಸ್ತರ ಪರ ನಟ ಚೇತನ್ ಧರಣಿ

ಮಡಿಕೇರಿ : ಕೊಡಗಿನ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ಸೂರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ಜನರನ್ನು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಿದ್ದಾರೆ. ಹೀಗಾಗಿ, ಹಾಡಿ ಜನ ಕಳೆದ ಹಲವು ದಿನಗಳಿಂದ ಧರಣಿ ಕುಳಿತಿದ್ದಾರೆ. ಈ ಹೋರಾಟಕ್ಕೆ ನಟ ಚೇತನ್ ಕೂಡಾ ಬೆಂಬಲ ನೀಡಿದ್ದಾರೆ. ಹಲವು ದಿನಗಳಿಂದ ಚೇತನ್ ಕೂಡಾ ಈ ಪ್ರತಿಭಟನಾ ನಿರತರೊಂದಿಗೆ ಕಾಲ ಕಳೆದಿದ್ದಾರೆ.
ಬೆತ್ತಲೆ ಪ್ರತಿಭಟನೆ : ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆಯ ಈ ಕ್ರಮ ಖಂಡಿಸಿ ಜನ ಹಲವು ದಿನಗಳಿಂದ ಪ್ರತಿಭಟನೆ ನಡೆಸಿದರೂ ಸರ್ಕಾರ ಇತ್ತ ಗಮನವೇ ಕೊಡಲಿಲ್ಲ. ಹೀಗಾಗಿ, ಒಂದು ವಾರದ ಹಿಂದೆ ಇಲ್ಲಿ ಬೆತ್ತಲೆ ಪ್ರತಿಭಟನೆಯೂ ನಡೆದಿದೆ. ಹಾಡಿಯ ಓರ್ವ ವ್ಯಕ್ತಿ ಮತ್ತು ಮಹಿಳೆ ಬೆತ್ತಲೆ ಪ್ರತಿಭಟನೆ ಮಾಡಿದ್ದು, ಈ ವೀಡಿಯೋ ಈಗ ಬಯಲಾಗಿದೆ. ಅರಣ್ಯ ಪ್ರದೇಶದಲ್ಲೇ ಪುನರ್ವಸತಿ ಕಲ್ಪಿಸುವಂತೆ ಈ ಜನ ಒತ್ತಾಯಿಸಿದ್ದಾರೆ.
ಕೊಡಗು-ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪ ದಿಡ್ಡಳ್ಳಿ ಹಾಡಿಯ ಅರಣ್ಯದಲ್ಲಿ ಅಕ್ರಮ ಗುಡಿಸಲು ತೆರವು ಕಾರ್ಯಾಚರಣೆಗಿಳಿದ್ದ ಅರಣ್ಯ ಇಲಾಖೆ ಡಿಸೆಂಬರ್ 6 ರಂದು ಆದಿವಾಸಿಗಳ ಮನೆಯನ್ನು ಕೆಡವಿತ್ತು. ಇದರಿಂದ 500ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದು ಅನಾಥವಾಗಿತ್ತು. ಮನೆ ಕಳೆದುಕೊಂಡು ನಿರ್ಗತಿಕರಾಗಿರುವ ಆದಿವಾಸಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!