Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅಮೀರ್ ಖಾನ್‍ಗೆ ರಜನಿಕಾಂತ್, ಚಿರಂಜೀವಿ ಜೊತೆ ನಟಿಸುವಾಸೆ

ಅಮೀರ್ ಖಾನ್‍ಗೆ ರಜನಿಕಾಂತ್, ಚಿರಂಜೀವಿ ಜೊತೆ ನಟಿಸುವಾಸೆ

ಹೈದರಾಬಾದ್ : ಬಾಲಿವುಡ್ ನಟ ಅಮೀರ್ ಖಾನ್ ತನ್ನ ಬಹುದಿನಗಳ ಕನಸನ್ನು ಬಿಚ್ಚಿಟ್ಟಿದ್ದಾರೆ. ದಕ್ಷಿಣ ಭಾರತದ ಸೂಪರ್‍ಸ್ಟಾರ್‍ಗಳಾದ ರಜನಿಕಾಂತ್, ಚಿರಂಜೀವಿ, ಪವನ್ ಕಲ್ಯಾಣ್ ಜೊತೆ ತನಗೆ ನಟಿಸುವ ಆಸೆ ಇದೆ ಎಂದು ಅಮೀರ್ ಹೇಳಿದ್ದಾರೆ. ತಮ್ಮ ಚಿತ್ರ `ದಂಗಾಲ್’ನ ಪ್ರಮೋಷನ್‍ಗೆಂದು ಹೈದರಾಬಾದ್‍ಗೆ ಬಂದಿದ್ದ ಅಮೀರ್ ತನ್ನ ಈ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಯಾರೊಂದಿಗೆ ನಟಿಸಲು ನೀವು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೀರ್ ಖಾನ್, `ತೆಲುಗು ಚಿತ್ರರಂಗದಲ್ಲಿ ನಾನು ಚಿರಂಜೀವಿ ಮತ್ತು ಪವನ್ ಕಲ್ಯಾಣ್‍ರದ್ದು ದೊಡ್ಡ ಅಭಿಮಾನಿ. ಹೀಗಾಗಿ, ಇವರೊಂದಿಗೆ ನಟಿಸುವುದಕ್ಕೆ ನಾನು ತುಂಬಾ ಇಷ್ಟಪಡುತ್ತೇನೆ. ಇನ್ನು, ತಮಿಳಿನಲ್ಲಿ ಅವಕಾಶ ಸಿಕ್ಕರೆ ನನಗೆ ರಜನಿಕಾಂತ್ ಜೊತೆ ನಟಿಸುವುದಕ್ಕೆ ಆಸೆ ಇದೆ. ನಾನು ಬಹುವರ್ಷದಿಂದ ರಜನಿಕಾಂತ್ ಅವರ ದೊಡ್ಡ ಅಭಿಮಾನಿ’ ಎಂದು ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!