Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಭಾರತದ ಮುಡಿಗೆ ಜ್ಯೂನಿಯರ್ ಹಾಕಿ ವಿಶ್ವಕಪ್ : ಬೆಲ್ಜಿಯಂ ವಿರುದ್ಧ 2-1 ಅಂತರದ ಗೆಲುವು
Lucknow: Indian team celebrate after beating England by 5-3 during Jr. World Cup Hockey Tournament at Major Dhyanchand Stadium in Lucknow on Saturday.PTI Photo(PTI12_10_2016_000270B)

ಭಾರತದ ಮುಡಿಗೆ ಜ್ಯೂನಿಯರ್ ಹಾಕಿ ವಿಶ್ವಕಪ್ : ಬೆಲ್ಜಿಯಂ ವಿರುದ್ಧ 2-1 ಅಂತರದ ಗೆಲುವು

ನವದೆಹಲಿ : ಜ್ಯೂನಿಯರ್ ಹಾಕಿ ವಿಶ್ವಕಪ್ ಭಾರತದ ಮುಡಿಗೇರಿದೆ. ಹರ್ಜಿತ್ ಸಿಂಗ್ ನೇತೃತ್ವದ ಪುರುಷರ ತಂಡ ಮತ್ತೊಮ್ಮೆ ಈ ಸಾಧನೆ ಮಾಡಿದೆ. ಬೆಲ್ಜಿಯಂ ವಿರುದ್ಧ ಭಾರತ 2-1 ಅಂತರದ ಗೆಲುವು ಸಾಧಿಸಿದೆ. ಈ ವರ್ಷದಲ್ಲಿ ಎರಡನೇ ಬಾರಿಗೆ ಭಾರತ ತಂಡ ಬೆಲ್ಜಿಯಂ ವಿರುದ್ಧ ಗೆಲುವಿನ ನಗೆ ಬೀರಿದೆ.

ಲಕ್ನೋದ ಮೇಜರ್ ಧ್ಯಾನ್‍ಚಂದ್ ಹಾಕಿ ಸ್ಟ್ರೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 2-1 ಗೋಲ್‍ಗಳ ಅಂತರದಲ್ಲಿ ಬೆಲ್ಜಿಯಂ ಅನ್ನು ಮಣಿಸುವ ಮೂಲಕ ಭಾರತದ ಆಟಗಾರರು ಹಾಕಿ ಜ್ಯೂನಿಯರ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 15 ವರ್ಷಗಳಲ್ಲಿ ಎರಡನೇ ಬಾರಿಗೆ ಭಾರತ ಈ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಹಿಂದೆ 2001ರಲ್ಲಿ ಭಾರತ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

video courtesy : TG Films

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!