Friday , October 19 2018
ಕೇಳ್ರಪ್ಪೋ ಕೇಳಿ
Home / Film News / Bollywood / ಪಾಕಿಸ್ತಾನದಲ್ಲಿ ಭಾರತ ಚಿತ್ರಗಳಿಗಿದ್ದ ನಿಷೇಧ ತೆರವು : ಡಿಸೆಂಬರ್ 19ರಿಂದ ಮತ್ತೆ ಪ್ರದರ್ಶನ

ಪಾಕಿಸ್ತಾನದಲ್ಲಿ ಭಾರತ ಚಿತ್ರಗಳಿಗಿದ್ದ ನಿಷೇಧ ತೆರವು : ಡಿಸೆಂಬರ್ 19ರಿಂದ ಮತ್ತೆ ಪ್ರದರ್ಶನ

ನವದೆಹಲಿ : ಉರಿ ದಾಳಿಯ ಬಳಿಕ ಭಾರತ ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತಿದ್ದ ಸಂಘರ್ಷದ ಪರಿಣಾಮ ಸ್ಥಗಿತವಾಗಿದ್ದ ಭಾರತೀಯ ಚಿತ್ರ ಪ್ರದರ್ಶನವನ್ನು ಮತ್ತೆ ಆರಂಭಿಸಲು ಪಾಕಿಸ್ತಾನ ನಿರ್ಧರಿಸಿದೆ. ಭಾರತದ ಸಿನೆಮಾಗಳ ಮೇಲೆ ಪಾಕಿಸ್ತಾನದ ವಿತರಕರು ಹೇರಿದ್ದ ಸ್ವಯಂ ನಿಷೇಧವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದು, ಡಿಸೆಂಬರ್ 19ರಿಂದ ಎಂದಿನಂತೆ ಭಾರತದ ಚಿತ್ರಗಳು ಪಾಕಿಸ್ತಾನದಲ್ಲೂ ಪ್ರದರ್ಶನವಾಗಲಿದೆ.

ಸೆಪ್ಟಂಬರ್ ತಿಂಗಳಲ್ಲಿ ನಡೆದಿದ್ದ ಉರಿ ಉಗ್ರರ ದಾಳಿ ಬಳಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭಾರತದ ಚಿತ್ರ ಪ್ರದರ್ಶನಕ್ಕೆ ವಿತರಕರು ನಿಷೇಧ ಹೇರಿದ್ದರು. ಆದರೆ, ಈ ನಿಷೇಧವನ್ನು ತೆರವುಗೊಳಿಸುವುದಾಗಿ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಜೋರೈಶಿ ಲಾಶರಿ ತಿಳಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!