Tuesday , February 19 2019
ಕೇಳ್ರಪ್ಪೋ ಕೇಳಿ
Home / News NOW / ಚೆಪಾಕ್‍ನಲ್ಲಿ ಇಂಗ್ಲೆಂಡ್ ವೈಟ್‍ವಾಶ್ : ಟೀಂ ಇಂಡಿಯಾಗೆ 75 ರನ್‍ಗಳ ಭರ್ಜರಿ ಜಯ

ಚೆಪಾಕ್‍ನಲ್ಲಿ ಇಂಗ್ಲೆಂಡ್ ವೈಟ್‍ವಾಶ್ : ಟೀಂ ಇಂಡಿಯಾಗೆ 75 ರನ್‍ಗಳ ಭರ್ಜರಿ ಜಯ

ಚೆನ್ನೈ : ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಜಯಗಳಿಸಿದೆ. ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ವಾಶ್‍ಔಟ್ ಆಗಿದೆ. ಚೆಪಾಕ್‍ನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು 75 ರನ್‍ಗಳ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 4-0 ಅಂತರಗಳ ಜಯ ಗಳಿಸಿದೆ.

ಈ ಸರಣಿಯಲ್ಲಿ ರವೀಂದ್ರ ಜಡೇಜಾ ಮಿಂಚಿದ್ದಾರೆ. ಒಟ್ಟು 10 ವಿಕೆಟ್ ಪಡೆದಿರುವ ಜಡೇಜಾ ಎರಡನೇ ಇನ್ನಿಂಗ್‍ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದಾರೆ.

ನಿನ್ನೆ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಗಳಿಸಿ, ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 759 ರನ್ ಗಳ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸಹಾಯವಾದರು. ಇನ್ನೋರ್ವ ಕನ್ನಡಿಗ ಕನ್ನಡಿಗ ಕೆ ಎಲ್ ರಾಹುಲ್ ಕೂಡಾ 199 ರನ್ ಗಳಿಸಿ ಗಮನ ಸೆಳೆದಿದ್ದರು. ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

score card courtesy : espncricinfo.com

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!