Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ಕರೀನಾ – ಸೈಫ್ ದಂಪತಿಗೆ ಗಂಡು ಮಗು

ಕರೀನಾ – ಸೈಫ್ ದಂಪತಿಗೆ ಗಂಡು ಮಗು

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕರೀನಾ ಕಪೂರ್ ಅವರ ಸ್ನೇಹಿತ ಕರಣ್ ಜೋಹರ್ ಈ ವಿಷಯವನ್ನು ಮೊದಲು ಬಹಿರಂಗಪಡಿಸಿದ್ದಾರೆ. ಹೊಸ ಅತಿಥಿಯ ಆಗಮನದಿಂದ ಸೈಫ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಮಂಗಳವಾರ ಬೆಳಗ್ಗೆ 7.30ರ ಹೊತ್ತಿಗೆ ಕರೀನಾ ಅವರು ಮುಂಬಯಿನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವಿಗೆ ತಮ್ಮ ಪ್ರತಿಷ್ಠೆಯ ರಾಜವಂಶಕ್ಕೆ ತಕ್ಕಂತೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದಾರೆ.
ಸೈಫ್‍ಗೆ ಇದು ಮೂರನೇ ಮಗು. ಈ ಹಿಂದೆ ಸೆಫ್ ಬಾಲಿವುಡ್ ನಟಿ ಅಮೃತಾ ಸಿಂಗ್‍ರನ್ನು ವರಿಸಿದ್ದರು. ಇವರಿಗೆ ಇಬ್ರಾಹಿಂ ಅಲಿ ಖಾನ್ ಮತ್ತು ಸಾರಾ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದು, ಬಳಿಕ ದಂಪತಿ ವಿಚ್ಚೇದನ ಪಡೆದಿದ್ದರು. ವಿಚ್ಚೇದನ ಬಳಿಕ ಸೈಫ್ ಕರೀನಾರನ್ನು ವರಿಸಿದ್ದರು.

ಇನ್ನು, ಈ ದಂಪತಿ ಕೂಡಾ ತಮ್ಮ ಮುದ್ದಿನ ಮಗನ ಆಗಮನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. We are very pleased to share with you all the wonderful news about the birth of our son : Taimur Ali Khan Pataudi, on the 20th of December 2016. We would like to thank the media for the understanding and support they have given us over the last 9 months, and of course especially our fans and well wishers for their continued affection. Merry Christmas and a happy new year to you all…With love, Saif & Kareena

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!