Monday , August 20 2018
ಕೇಳ್ರಪ್ಪೋ ಕೇಳಿ
Home / News NOW / ಸ್ಪೀಕರ್ ಅಧಿಕಾರ ದಂಡ ಹಿಡ್ಕೊಂಡು ಓಡಿದ ಶಾಸಕ…! : ಇಲ್ಲಿದೆ ವೀಡಿಯೋ

ಸ್ಪೀಕರ್ ಅಧಿಕಾರ ದಂಡ ಹಿಡ್ಕೊಂಡು ಓಡಿದ ಶಾಸಕ…! : ಇಲ್ಲಿದೆ ವೀಡಿಯೋ

ಅಗರ್ತಲ : ಜನಪ್ರತಿನಿಧಿಗಳು ಕೆಲವೊಮ್ಮೆ ಎಷ್ಟು ಬಾಲಿಶಃವಾಗಿ ವರ್ತಿಸ್ತಾರೆ ಎಂಬುದಕ್ಕೆ ಸಾಕ್ಷಿ ಇದು. ತ್ರಿಪುರದ ವಿರೋಧ ಪಕ್ಷದ ಶಾಸಕರೊಬ್ಬರು ವರ್ತಿಸಿದ ರೀತಿಗೆ ಸ್ವತಃ ಸ್ಪೀಕರ್ ಅವರೇ ದಂಗಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ಸ್ಪೀಕರ್ ಅವರ ಅಧಿಕಾರ ದಂಡವನ್ನೇ ಹಿಡ್ಕೊಂಡು ಇಡೀ ಸದನ ತುಂಬಾ ಓಡಿದ್ದಾರೆ. ಇಲ್ಲಿದೆ ನೋಡಿ ಮಕ್ಕಳಾಟಿಕೆಯಂತಹ ಆ ವೀಡಿಯೋ.

ಅರಣ್ಯ ಸಚಿವ ನರೇಶ್ ಜಮಾಟಿಯಾ ಅವರ ಲೈಂಗಿಕ ಹಗರಣ ಮತ್ತು ಅಗರ್ತಲಾ ಮನ್ಸಿಪಲ್ ಕಾಪೋರೇಷನ್‍ನ ಸದಸ್ಯ ಮರೀನ್‍ಮಯ್ ಸೇನ್ ವಿರುದ್ಧದ ಲೈಂಗಿಕ ಕಿರುಕುಳದ ಬಗ್ಗೆ ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ಮತ್ತು ಇತರ ಸದಸ್ಯರು ಘೋಷಣೆ ಕೂಗುತ್ತಿದ್ದರು. ಆದರೆ, ಸ್ಪೀಕರ್ ರಮೆಂದ್ರ ಚಂದ್ರನಾಥ್ ಈ ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಈ ವೇಳೆ ಸಿಟ್ಟೆದ್ದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ಮಾಡಲು ಆರಂಭಿಸಿದರು. ಈ ವೇಳೆ ಸುದೀಪ್ ರಾಯ್ ಬರ್ಮನ್ ಸ್ಪೀಕರ್ ಎದುರುಗಡೆ ಹೋಗಿ ಸ್ಪೀಕರ್ ಅಧಿಕಾರ ದಂಡವನ್ನೇ ಹಿಡಿದು ಓಡಿದ್ದಾರೆ. ಇವರನ್ನು ಮಾರ್ಷಲ್‍ಗಳು ಬೆನ್ನತ್ತಿಕೊಂಡು ಓಡಿದ್ದಾರೆ. ಬಳಿಕ ಕಷ್ಟಪಟ್ಟು ಮಾರ್ಷಲ್‍ಗಳು ಈ ಅಧಿಕಾರದಂಡವನ್ನು ಬರ್ಮನ್ ಕೈಯಿಂದ ವಾಪಸ್ ಪಡೆದಿದ್ದಾರೆ. ಶಾಸಕರ ಈ ವರ್ತನೆಯನ್ನು ಬಹುತೇಕರು ಖಂಡಿಸಿದ್ದಾರೆ.
video courtesy : Hindustan Times / youtube

About sudina

Check Also

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!