Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಕೋಸ್ಟಲ್‍ವುಡ್‍ಗೆ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ : `ಅಂಬರ್ ಕ್ಯಾಟರಸ್’ ಚಿತ್ರದಲ್ಲಿ ಅಭಿನಯ

ಕೋಸ್ಟಲ್‍ವುಡ್‍ಗೆ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ : `ಅಂಬರ್ ಕ್ಯಾಟರಸ್’ ಚಿತ್ರದಲ್ಲಿ ಅಭಿನಯ

ಮಂಗಳೂರು : ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕೋಸ್ಟಲ್‍ವುಡ್‍ಗೆ ಬಂದಿದ್ದಾರೆ. `ಅಂಬರ್ ಕ್ಯಾಟರಸ್’ ಚಿತ್ರದಲ್ಲಿ ಈ ಬಹುಭಾಷಾ ನಟಿ ನಟಿಸುತ್ತಿದ್ದಾರೆ. ಜೈಪ್ರಸಾದ್ ಬಜಾಲ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತಿ, ತುಳು ಭಾಷೆಯ ಚಿತ್ರದಲ್ಲಿ ನಟಿಸುವ ಬಗ್ಗೆ ಆಸೆ ಇತ್ತು. ಆದರೆ, ಅವಕಾಶಗಳು ಸಿಕ್ಕಿರಲಿಲ್ಲ. ಈಗ ಈ ಅವಕಾಶ ಸಿಕ್ಕಿದೆ. ಇದಕ್ಕೆ ಖುಷಿಯಾಗಿದೆ. ಭಾಷೆ ಬರದೇ ಇದ್ದರೂ ಇದು ನಮ್ಮದೇ ಭಾಷೆ ಎಂಬ ಅಭಿಮಾನ ನನಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕರಾವಳಿಯ ಜನ ಹೃದಯವಂತರು ಎಂದು ವಿಷ್ಣುವರ್ಧನ್ ಹೇಳುತ್ತಿದ್ದರು ಎಂಬುದನ್ನೂ ಭಾರತಿ ನೆನಪಿಸಿಕೊಂಡಿದ್ದಾರೆ.

ಇದೇ ವೇಳೆ, ಕನ್ನಡದ ಮತ್ತೋರ್ವ ನಟ ಶರತ್ ಲೋಹಿತಾಶ್ವ ಕೂಡಾ ಇದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾಷೆ ಗೊತ್ತಿಲ್ಲದಿದ್ದರೂ ಇಲ್ಲಿನ ಜನರ ಪ್ರೀತಿಯನ್ನು ಮರೆಯುವಂತಿಲ್ಲ ಎಂದು ಶರತ್ ಖುಷಿ ವ್ಯಕ್ತಪಡಿಸಿದ್ದಾರೆ.

ಇನ್ನು, ಕನ್ನಡದ ಸಿಂಧು ಲೋಕನಾಥ್ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುರೇಶ್ ಭಂಡಾರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!