Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಭಾವನಾ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ : ತಾಯಿ ಸ್ಪಷ್ಟನೆ

ಭಾವನಾ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ : ತಾಯಿ ಸ್ಪಷ್ಟನೆ

ಬೆಂಗಳೂರು : ದಕ್ಷಿಣ ಭಾರತದ ನಟಿ ಭಾವನಾ ಕನ್ನಡದ ನಿರ್ಮಾಪಕ ನವೀನ್‍ರನ್ನು ವರಿಸಲಿದ್ದಾರೆ ಎಂಬುದು ಹಳೇ ಸುದ್ದಿ. ಆದರೆ, ಈ ಸುದ್ದಿ ನಡುವೆಯೂ ಮುಂದಿನ ಏಪ್ರಿಲ್‍ನಲ್ಲಿ ಇವರಿಬ್ಬರ ಮದುವೆಯೂ ನಡೆಯಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಸುದ್ದಿಯನ್ನು ಭಾವನಾ ತಾಯಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಮದುವೆ ದಿನಾಂಕವನ್ನು ಇನ್ನೂ ನಾವು ನಿಗದಿ ಮಾಡಿಲ್ಲ ಎಂದು ಭಾವನಾ ತಾಯಿ ಸ್ಪಷ್ಟಪಡಿಸಿದ್ದಾರೆ.

`ನಾವಿನ್ನೂ ಮದುವೆ ದಿನಾಂಕ ನಿಗದಿ ಮಾಡಿಲ್ಲ. ಆದರೆ, ಏಪ್ರಿಲ್‍ನಲ್ಲಿ ಮದುವೆ ನಡೆಯಲಿದೆ ಎಂಬ ಸುದ್ದಿ ಕೇಳಿ ನಮಗೆ ತಮಾಷೆ ಅಂತ ಅನಿಸುತ್ತಿದೆ. ಅಧಿಕೃತ ದಿನಾಂಕವನ್ನು ನಾವೇ ಪ್ರಕಟಿಸುತ್ತೇವೆ ಮತ್ತು ಸರಿಯಾದ ಸಮಯದಲ್ಲೇ ಈ ದಿನಾಂಕವನ್ನು ನಾವು ಪ್ರಕಟಿಸುತ್ತೇವೆ ಎಂದು ಭಾವನಾ ತಾಯಿ ಪುಷ್ಪಾ ತಿಳಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!