ಮುಂಬೈ : ಕ್ಲಾಸಿಕ್ ಹಾಡು `ಲೈಲಾ ಓ ಲೈಲಾ’ ಹೊಸ ರೂಪದಲ್ಲಿ ಬಂದಿದೆ. `ಲೈಲಾ ಮೇ ಲೈಲಾ’ ಹಾಡಿನ ಮೂಲಕ ಈ ಹಾಡು ಬಂದಿದೆ. ಶಾರೂಖ್ ಖಾನ್ ಅಭಿನಯದ `ರಾಯಿಸ್’ ಚಿತ್ರದಲ್ಲಿ ಈ ಹಾಡಿದ್ದು, ಸನ್ನಿ ಲಿಯೋನ್ ಈ ಹಾಡಿನ ಮೂಲಕ ಮತ್ತೆ ಮಿಂಚಿದ್ದಾರೆ. ಅಂದು ಝಿನತ್ ಅಮಾನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇನ್ನು, ರಾಯಿಸ್ ಚಿತ್ರ ಜನವರಿ 25ರಂದು ಬಿಡುಗಡೆ ಆಗಲಿದೆ.
