ತಿರುವನಂತಪುರಂ : ಮಲಯಾಲಂ ಸೂಪರ್ಸ್ಟಾರ್ ಮೋಹನ್ಲಾಲ್ ಚಿತ್ರ `ಪುಲಿಮುರುಗನ್’ ದಾಖಲೆ ಬರೆದಿದೆ. ಮಲಯಾಲಂ ಚಿತ್ರರಂಗದ ಈ ವರೆಗಿನ ಎಲ್ಲಾ ದಾಖಲೆಗಳನ್ನು ಈ ಚಿತ್ರ ಮುರಿದಿದೆ. ನೂರು ಕೋಟಿ ಕ್ಲಬ್ ಅನ್ನು ಬಹುಬೇಗ ಸೇರುವ ಮೂಲಕವೇ ಈ ಚಿತ್ರ ಮೊದಲು ದಾಖಲೆ ಬರೆದಿತ್ತು. ಅಷ್ಟೇ ಅಲ್ಲ, ಮುಂಬೈಯಲ್ಲಿ ಬಾಲಿವುಡ್ ಚಿತ್ರಗಳಾದ ಸುಲ್ತಾನ್, ರುಸ್ತುಂ ಮತ್ತು ಎಂ.ಎಸ್.ಧೋನಿ ಚಿತ್ರ ಮಾಡಿದ ದಾಖಲೆಯನ್ನೂ ಈ ಚಿತ್ರ ಸರಿಗಟ್ಟಿದೆ.
