Friday , October 19 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಸೊಕ್ಕಿನ ಮನುಷ್ಯ : ಸಂಜಯ್ ದತ್

ಸಲ್ಮಾನ್ ಸೊಕ್ಕಿನ ಮನುಷ್ಯ : ಸಂಜಯ್ ದತ್

ಮುಂಬೈ : ಬಾಲಿವುಡ್‍ನಲ್ಲಿ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಆಪ್ತ ಮಿತ್ರರೆಂದೇ ಗುರುತಿಸಿಕೊಂಡಿದ್ದವರು. ಬಹುತೇಕ ಸಂದರ್ಭದಲ್ಲಿ ಜೊತೆಯಾಗಿ ಕಾಣಿಸಿಕೊಂಡು ಇವರು ತಮ್ಮ ಸ್ನೇಹವನ್ನು ಸಾರಿದ್ದರು. ದತ್ ಜೈಲಿನಿಂದ ಬಿಡುಗಡೆಯಾದಾಗ ನಾನು ಪಾರ್ಟಿ ಮಾಡುತ್ತೇನೆ ಎಂದೂ ಸಲ್ಮಾನ್ ಹೇಳಿದ್ದರು. ಆದರೆ, ಈಗ ಇವರಿಬ್ಬರ ಸ್ನೇಹ ಹಿಂದಿನಂತಿಲ್ಲ. ಇಬ್ಬರ ನಡುವೆ ವೈಮನಸ್ಸು ಇದೆ ಎಂಬ ಸುದ್ದಿ ಹಬ್ಬಿದೆ.

ಇದಕ್ಕೆ ಪೂರಕವೆಂಬಂತೆ ದತ್ ಸಲ್ಮಾನ್ ಅಹಂಕಾರದ ವ್ಯಕ್ತಿ ಎಂದು ಹೇಳಿದ್ದಾರೆ. ರ್ಯಾಪಿಡ್ ಫೈರ್ ರೌಂಡ್‍ನಲ್ಲಿ ಸಲ್ಮಾನ್ ಖಾನ್ ಬಗ್ಗೆ ಹೇಳುವಂತೆ ದತ್‍ಗೆ ಕೇಳಲಾಗಿತ್ತು. ಈ ವೇಳೆ, ದತ್ `ಅರೊಗೆಂಟ್’ ಎಂದು ಉತ್ತರ ನೀಡಿದ್ದಾರೆ. ಇದಕ್ಕಿಂತ ಮುನ್ನವೇ ಸಲ್ಮಾನ್ ಮತ್ತು ದತ್ ಸಂಬಂಧ ಹಳಸಿದ್ದಾಗಿ ಸುದ್ದಿ ಹಬ್ಬಿತ್ತು. ಅದೂ ಅಲ್ಲದೆ, ಜೈಲಿನಿಂದ ದತ್ ಹೊರಬಂದ ಮೇಲೆ ಸಲ್ಮಾನ್ ಅವರನ್ನು ಒಮ್ಮೆಯೂ ಭೇಟಿಯಾಗಿಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!