Saturday , December 15 2018
ಕೇಳ್ರಪ್ಪೋ ಕೇಳಿ
Home / Sandalwood / ತಿಥಿಯ ಮುಗ್ಧ ಕಲಾವಿದರ ದುರ್ಬಳಕೆ…? : ಕತೆಗಾರ ಈರೇಗೌಡ ಅಸಮಾಧಾನ

ತಿಥಿಯ ಮುಗ್ಧ ಕಲಾವಿದರ ದುರ್ಬಳಕೆ…? : ಕತೆಗಾರ ಈರೇಗೌಡ ಅಸಮಾಧಾನ

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ತಿಥಿ’ ಚಿತ್ರ ಸಾಕಷ್ಟು ಹೆಸರು ಮಾಡಿತ್ತು. ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಕತೆಯೇ ಚಿತ್ರವಾಗಿತ್ತು. ನೈಜ್ಯ ಚಿತ್ರಣವೇ ತೆರೆ ಮೇಲೆ ಬಂದಿತ್ತು. ಪರಿಣಾಮ, ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿತ್ತು. ಈ ಚಿತ್ರದ ಬಳಿಕ ಕಲಾವಿದರು ಕೂಡಾ ಸಾಕಷ್ಟು ಹೆಸರು ಗಳಿಸಿದರು. ಅದರಲ್ಲೂ ಗಡ್ಡಪ್ಪ ಮತ್ತು ಸೆಂಚುರಿಗೌಡ ಅವರಂತೂ ಸಖತ್ ಫೇಮಸ್ ಆಗಿದ್ದರು. ಬಳಿಕ ಇವರಿಗೆ ಹಲವು ಅವಕಾಶಗಳೂ ಸಿಕ್ಕಿದ್ದವು. ಆದರೆ, ಈ ಅವಕಾಶದ ನಾಗಾಲೋಟದಲ್ಲಿ ಮುಗ್ಧ ಕಲಾವಿದರು ದುರ್ಬಳಕೆ ಆಗುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ತಿಥಿಗೆ ಕತೆ, ಸಂಭಾಷಣೆ ಬರೆದಿದ್ದ ಈರೇಗೌಡ ಅವರೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಜೊತೆಗೆ, ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ. ಈರೇಗೌಡರ ಫೇಸ್‍ಬುಕ್ ಸ್ಟೇಟಸ್ ಇಲ್ಲಿದೆ ನೋಡಿ… ಈರೇಗೌಡರ ಈ ಪೋಸ್ಟ್ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!