Saturday , September 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ವೈಯಕ್ತಿಕವಾಗಿ ಪ್ರೀತಿಸುತ್ತೇನೆ, ವೃತ್ತಿಪರವಾಗಿ ದ್ವೇಷಿಸುತ್ತೇನೆ : ಅಮೀರ್‍ಗೆ ಸಲ್ಮಾನ್ ಖಾನ್

ವೈಯಕ್ತಿಕವಾಗಿ ಪ್ರೀತಿಸುತ್ತೇನೆ, ವೃತ್ತಿಪರವಾಗಿ ದ್ವೇಷಿಸುತ್ತೇನೆ : ಅಮೀರ್‍ಗೆ ಸಲ್ಮಾನ್ ಖಾನ್

ಮುಂಬೈ : ಸಲ್ಮಾನ್ ಮತ್ತು ಅಮೀರ್ ಖಾನ್ ವೈಯಕ್ತಿಕವಾಗಿ ದೊಡ್ಡ ಸ್ನೇಹಿತರೇನಲ್ಲ. ಆದರೆ, ವೃತ್ತಿಪರವಾಗಿ ಇವರಿಬ್ಬರಿಗೆ ಪರಸ್ಪರ ಗೌರವವಿದೆ ಮತ್ತು ಇಬ್ಬರು ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಗುಣಕ್ಕೆ ಮತ್ಸರವಿಲ್ಲವೆಂಬಂತೆ ಒಳ್ಳೆಯ ಕೆಲಸವನ್ನು ಶ್ಲಾಘಿಸುವುದಕ್ಕೂ ಇವರಿಬ್ಬರು ಮರೆಯುವುದಿಲ್ಲ. ಈಗಲೂ ಹಾಗೆಯೇ ಆಗಿದೆ. ಅಮೀರ್ `ದಂಗಲ್’ ಚಿತ್ರದ ಟ್ರೇಲರ್ ನೋಡಿರುವ ಸಲ್ಮಾನ್ ಖಾನ್ ಈ ಚಿತ್ರ `ಸುಲ್ತಾನ್’ಗಿಂತಲೂ ಚೆನ್ನಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, `ದಂಗಲ್’ ಚಿತ್ರ ವೀಕ್ಷಿಸುವುದಾಗಿ ಹೇಳಿದ್ದಾರೆ.

ಟ್ವಿಟರ್‍ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಲ್ಮಾನ್, ಅಮೀರ್‍ನನ್ನು ವೈಯಕ್ತಿಕವಾಗಿ ಪ್ರೀತಿಸುತ್ತೇನೆ. ಆದರೆ, ವೃತ್ತಿಪರವಾಗಿ ದ್ವೇಷಿಸುತ್ತೇನೆ ಎಂದು ಸೂಚ್ಯವಾಗಿ ಹೇಳುವ ಮೂಲಕ ಮತ್ತೆ ಅಮೀರ್‍ರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಸಲ್ಮಾನ್ ಮಾತ್ರವಲ್ಲದೆ ಬಾಲಿವುಡ್‍ನ ಹಲವು ಕಲಾವಿದರು `ದಂಗಲ್’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!