Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ಫೋಬ್ಸ್ ಪಟ್ಟಿಯಲ್ಲಿ ಸಲ್ಮಾನ್ ನಂಬರ್ 1

ಫೋಬ್ಸ್ ಪಟ್ಟಿಯಲ್ಲಿ ಸಲ್ಮಾನ್ ನಂಬರ್ 1

ಮುಂಬೈ : ಸಲ್ಮಾನ್ ಖಾನ್ ಈಗ ಬಾಲಿವುಡ್‍ನಲ್ಲಿ ಸುಲ್ತಾನ್. ಗಳಿಕೆಯಲ್ಲೂ ಸಲ್ಲೂನೇ ಸುಲ್ತಾನ್. 2016ರ ಪೋಬ್ಸ್ ಇಂಡಿಯಾ ಪಟ್ಟಿಯಲ್ಲಿ ಸಲ್ಮಾನ್‍ಗೆ ಅಗ್ರ ಸ್ಥಾನ. ತನ್ನ ವಾರ್ಷಿಕ ಗಳಿಕೆಯ ಮೊತ್ತದಿಂದಲೇ ಸಲ್ಮಾನ್ ಅಗ್ರಪಟ್ಟಕ್ಕೇರಿದ್ದಾರೆ. ಭಾರತದ ನೂರು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಲೂಮಿಯಾಗೆ ನಂಬರ್ ವನ್ ಪಟ್ಟ…

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಇದೆ. ಸಲ್ಲೂ ಈ ಬಾರಿ ಬಾಲಿವುಡ್‍ನ ಇನ್ನೋರ್ವ ಖಾನ್ ಶಾರೂಖ್‍ರನ್ನು ಹಿಂದಿಕ್ಕಿದ್ದಾರೆ. ಕಳೆದ ವರ್ಷ ಶಾರೂಖ್ ನಂಬರ್ 1 ಪಟ್ಟದಲ್ಲಿದ್ದರೆ, ಸಲ್ಮಾನ್ ಎರಡನೇ ಸ್ಥಾನದಲ್ಲಿದ್ದರು. ಈ ವರ್ಷ ಇದು ಸರೀ ಉಲ್ಟಾ…

ಬರೀ ಶಾರೂಖ್ ಅಷ್ಟೇ ಅಲ್ಲ, ಸಲ್ಮಾನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಎಲ್ಲರನ್ನೂ ಆದಾಯದಲ್ಲಿ ಹಿಂದಿಕ್ಕಿ ಅಗ್ರ ಪಟ್ಟಕ್ಕೇರಿದ್ದಾರೆ. ಸಲ್ಮಾನ್‍ರ ಸುಲ್ತಾನ್ ಚಿತ್ರ ಈ ವರ್ಷ ಬಾಲಿವುಡ್‍ನಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರ. ಉತ್ತಮ ವಿಮರ್ಶೆ ಕೂಡಾ ಈ ಚಿತ್ರಕ್ಕೆ ಬಂದಿತ್ತು. 300.45 ಕೋಟಿ ರೂಪಾಯಿಯನ್ನು ಈ ಚಿತ್ರ ಗಳಿಸಿತ್ತು. ಇದಾದ ಬಳಿಕ ಬಂದ ಪ್ರೇಮ್ ರತನ್ ಧನ್ ಪಾವೋ ಕೂಡಾ ಗಳಿಕೆಯಲ್ಲಿ ಒಳ್ಳೆಯ ಸಾಧನೆಯನ್ನೇ ಮಾಡಿತ್ತು.

ಇನ್ನು, ಬಾಲಿವುಡ್‍ನ ಮತ್ತೋರ್ವ ಖಾನ್ ಅಮೀರ್ ಮಾತ್ರ ಈ ಬಾರಿ ಟಾಪ್ ಟೆನ್ ಪಟ್ಟಿಯಲ್ಲೂ ಇಲ್ಲ. ಕಳೆದ ವರ್ಷ 15ನೇ ಸ್ಥಾನದಲ್ಲಿದ್ದ ಅಮೀರ್ ಮೂರು ಸ್ಥಾನ ಮುಂದಕ್ಕೆ ಬಂದು 12ನೇ ಸ್ಥಾನಕ್ಕೆ ಬಂದಿದ್ದಾರೆ. ಆದರೆ, ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬಹುಶಃ ಈ ವರ್ಷ ದಂಗಾಲ್ ಬಿಟ್ಟು ಅಮೀರ್‍ನ ಯಾವೊಂದು ಚಿತ್ರ ರಿಲೀಸ್ ಆಗದೇ ಇರುವುದು ಕೂಡಾ ಇದಕ್ಕೆ ಕಾರಣ ಇರಬಹುದು.
ಈ ಪಟ್ಟಿಯನ್ನು ಸೆಲೆಬ್ರಿಟಿಗಳ ಗಳಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಖ್ಯಾತಿಯ ಆಧಾರದ ಮೇಲೆ ತಯಾರು ಮಾಡಲಾಗಿದೆ. ಇನ್ನು, ಟಾಪ್ ಟೆನ್ ಸೆಲೆಬ್ರಿಟಿಗಳ ಪಟ್ಟಿ ಇಂತಿದೆ…

ಫೋಬ್ರ್ಸ್ ಟಾಪ್ 10 ಪಟ್ಟಿ (ಕೋಟಿಯಲ್ಲಿ)

1 ಸಲ್ಮಾನ್ ಖಾನ್ – 270.33
2 ಶಾರೂಖ್ ಖಾನ್ – 221.75
3 ವಿರಾಟ್ ಕೊಹ್ಲಿ – 134.44
4 ಅಕ್ಷಯ್ ಕುಮಾರ್ – 203.03
5 ಮಹೇಂದ್ರ ಸಿಂಗ್ ಧೋನಿ – 122.48
6 ದೀಪಿಕಾ ಪಡುಕೋಣೆ – 69.75
7 ಸಚಿನ್ ತೆಂಡೂಲ್ಕರ್ – 58
8 ಪ್ರಿಯಾಂಕಾ ಚೋಪ್ರಾ – 76
9 ಅಮಿತಾಭ್ ಬಚ್ಚನ್ – 32.62
10. ಹೃತಿಕ್ ರೋಷನ್ – 90.25

ಇನ್ನು, ಸೂಪರ್‍ಸ್ಟಾರ್ ರಜನಿಕಾಂತ್ ಈ ವರ್ಷ 35 ಕೋಟಿ ರೂಪಾಯಿ ಗಳಿಸಿದರೂ ಈ ಬಾರಿ 53ನೇ ಸ್ಥಾನವನ್ನು ಪಡೆದಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!