Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ರಾಮ್‍ಮೋಹನ್ ರಾವ್‍ಗೆ ಎದೆನೋವು : ಆಸ್ಪತ್ರೆಗೆ ದಾಖಲು

ರಾಮ್‍ಮೋಹನ್ ರಾವ್‍ಗೆ ಎದೆನೋವು : ಆಸ್ಪತ್ರೆಗೆ ದಾಖಲು

ಚೆನ್ನೈ : ಐಟಿ ಅಧಿಕಾರಿಗಳ ದಾಳಿ ಬಳಿಕ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಕಾರ್ಯದರ್ಶಿ ಪಿ ರಾಮ್‍ಮೋಹನ್ ರಾವ್‍ಗೆ ಎದೆ ನೋವು ಕಾಣಿಸಿಕೊಂಡಿದೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ರಾಮ್‍ಮೋಹನ್ ಅವರನ್ನು ದಾಖಲಿಸಲಾಗಿದೆ. ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಇವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸದ್ಯ ರಾಮ್‍ಮೋಹನ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಗೆ ವೈದ್ಯರು ತಿಳಿಸಿದ್ದಾರೆ.
ನೋಟ್ ಬ್ಯಾನ್ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ಸಂದರ್ಭದಲ್ಲಿ ರಾಮ್‍ಮೋಹನ್ ಅಕ್ರಮ ಆಸ್ತಿ ಪತ್ತೆಯಾಗಿತ್ತು. 30 ಲಕ್ಷದಷ್ಟು ಹೊಸ ನೋಟು, 5 ಕೆಜಿ ಬಂಗಾರ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಸಿಕ್ಕಿದ್ದವು. ರಾಮ್‍ಮೋಹನ್ ಮನೆ, ಕಚೇರಿ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದರು.

ಈ ದಾಳಿ ಬಳಿಕ ಎರಡು ದಿನಗಳಿಂದ ರಾಮ್‍ಮೋಹನ್‍ರನ್ನು ಮುಖ್ಯಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿ ಆ ಸ್ಥಾನಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಗಿರಿಜಾ ವೈದ್ಯನಾಥನ್ ಅವನ್ನು ನೇಮಿಸಲಾಗಿತ್ತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!