Wednesday , January 24 2018
Home / News NOW / ಸಮುದ್ರ ನಡುವಿನಲ್ಲಿ ಶಿವಾಜಿ ಸ್ಮಾರಕ : ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ : ಮೀನುಗಾರರ ಪ್ರತಿಭಟನೆ
Buy Bitcoin at CEX.IO

ಸಮುದ್ರ ನಡುವಿನಲ್ಲಿ ಶಿವಾಜಿ ಸ್ಮಾರಕ : ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ : ಮೀನುಗಾರರ ಪ್ರತಿಭಟನೆ

ಮುಂಬೈ : ಅರಬ್ಬಿ ಸಮುದ್ರದಲ್ಲಿ ಸುಮಾರು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಛತ್ರಪತಿ ಶಿವಾಜಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಜಲ ಪೂಜೆ ಮಾಡುವ ಮೂಲಕ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಯಿತು.
ಗಿರ್ಗಾಮ್ ಚೌಪಟಿ ಸಮೀಪ ಈ ಸ್ಮಾರಕ ನಿರ್ಮಾಣವಾಗುತ್ತಿದೆ. ಇಲ್ಲಿ ಪ್ರಧಾನಿ ಮೋದಿ ಪವಿತ್ರ ಜಲವನ್ನು ಮಡಕೆಯಿಂದ ಸುರಿಯುವ ಮೂಲಕ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಕೊಟ್ಟರು. ಈ ವೇಳೆ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇನ್ನೊಂದ್ಕಡೆ, ಶಿವಾಜಿ ಬೃಹತ್ ಪ್ರತಿಮೆಯ ಸ್ಮಾರಕ ನಿರ್ಮಾಣದಿಂದ ಮೀನುಗಾರಿಕೆಗೆ ಧಕ್ಕೆ ಉಂಟಾಗಲಿದ್ದು, ಸ್ಮಾರಕ ನಿರ್ಮಾಣ ಬೇಡ ಎಂದು ಮೀನುಗಾರರು ಪ್ರತಿಭಟನೆ ಮಾಡಿದ ಘಟನೆಯೂ ನಡೆಯಿತು.
8 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿದ್ದಾಗ ಈ ಬೃಹತ್ ಸ್ಮಾರಕ ನಿರ್ಮಾಣದ ಪ್ರಸ್ತಾವನೆ ತಯಾರಿಸಿತ್ತು. ಆದರೆ, ಬಿಜೆಪಿ ಸರ್ಕಾರ ಇದನ್ನು ಜಾರಿಗೆ ತಂದಿದೆ. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಮರಾಠ ಸಮುದಾಯವನ್ನು ತಮ್ಮತ್ತ ಸೆಳೆಯುವ ಸಲುವಾಗಿ ಬಿಜೆಪಿ ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದೆ ಎಂದು ವಿಪಕ್ಷಗಳು ಟೀಕೆ ಮಾಡಿವೆ.

ಇನ್ನು, ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂಬೈ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!