Sunday , February 17 2019
ಕೇಳ್ರಪ್ಪೋ ಕೇಳಿ
Home / News NOW / ಶಬರಿಮಲೆಯಲ್ಲಿ ಕಾಲ್ತುಳಿತ : 25ಕ್ಕೂ ಹೆಚ್ಚು ಜನರಿಗೆ ಗಾಯ

ಶಬರಿಮಲೆಯಲ್ಲಿ ಕಾಲ್ತುಳಿತ : 25ಕ್ಕೂ ಹೆಚ್ಚು ಜನರಿಗೆ ಗಾಯ

ಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ 25ಕ್ಕೂ ಹೆಚ್ಚು ಭಕ್ತರಿಗೆ ಗಾಯಗಳಾಗಿದ್ದು, ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಇವತ್ತು ಸಾಕಷ್ಟು ಭಕ್ತರು ಜಮಾಯಿಸಿದ್ದರಿಂದ ಇಲ್ಲಿ ಈ ದುರಂತ ಸಂಭವಿಸಿದೆ. ಸಂಜೆಯ ಪೂಜೆಗೆ ಎಂದಿಗಿಂತ ಹೆಚ್ಚೇ ಜನರು ಇವತ್ತು ಭಾಗಿಯಾಗಿದ್ದರು. ತೀವ್ರವಾಗಿ ಗಾಯಗೊಂಡ ಭಕ್ತರನ್ನು ಪಂಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಿಮೆ ಗಾಯಗೊಂಡ ಭಕ್ತರಿಗೆ ಅಯ್ಯಪ್ಪ ದೇವಸ್ಥಾನದಲ್ಲೇ ಚಿಕಿತ್ಸೆ ನೀಡಲಾಗಿದೆ.

ಪೂಜೆಯ ಬಳಿಕ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರು ಮುಗಿಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಕ್ಯೂ ಇದಕ್ಕೂ ಮುನ್ನುಗಲು ಕೆಲವು ಭಕ್ತರು ಯತ್ನಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಮಂಡಲಪೂಜೆಗೆ ಅಯ್ಯಪ್ಪ ದೇವರಿಗೆ ತೊಡಿಸಲು ತರುವ ಚಿನ್ನಾಭರಣಗಳನ್ನು ದೇಗುಲಕ್ಕೆ ತರುವ ಸಂದರ್ಭದಲ್ಲೇ ಈ ದುರಂತ ನಡೆದು ಹೋಗಿದೆ. ಮಂಡಲಪೂಜೆಗಿಂತ ನಾಲ್ಕು ದಿನ ಮುಂಚಿತವಾಗಿ ಅರನ್‍ಮುಲಾ ಶ್ರೀ ಪಾರ್ಥಸಾರಥಿ ದೇವಸ್ಥಾನದಿಂದ ಈ ಆಭರಣಗಳ ಮೆರವಣಿಗೆ ಆರಂಭವಾಗಿತ್ತು.

2011ರಲ್ಲಿ ಶಬರಿಮಲೆಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಮಕರಜ್ಯೋತಿ ದರ್ಶನ ಸಂದರ್ಭದಲ್ಲಿ ನಡೆದ ಈ ದುರಂತದಲ್ಲಿ 106 ಭಕ್ತರು ದಾರುಣವಾಗಿ ಸಾವನ್ನಪ್ಪಿದ್ದರು. 100ಕ್ಕೂ ಅಧಿಕ ಜನ ಗಾಯಗೊಂಡಿದ್ದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!