Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ರೈತರಿಗೆ ಬಿಗ್ ರಿಲೀಫ್ : ಬೆಳೆಸಾಲ ಮರುಪಾವತಿಗೆ 60 ದಿನಗಳ ಕಾಲಾವಕಾಶ

ರೈತರಿಗೆ ಬಿಗ್ ರಿಲೀಫ್ : ಬೆಳೆಸಾಲ ಮರುಪಾವತಿಗೆ 60 ದಿನಗಳ ಕಾಲಾವಕಾಶ

ನವದೆಹಲಿ : ಬೆಳೆಸಾಲ ಮರುಪಾವತಿ ವಿಚಾರದಲ್ಲಿ ರೈತರಿಗೆ ಬಿಗ್ ರಿಲೀಫ್ ಸಿಕ್ಕಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಬೆಳೆಸಾಲ ಮರುಪಾವತಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ಆರ್‍ಬಿಐ ನೀಡಿದೆ.

ನೋಟು ಬ್ಯಾನ್ ಬಳಿಕ ಸಂಕಷ್ಟ ಅನುಭವಿಸಿದ್ದ ರೈತರಿಗೆ ಇದರಿಂದ ಕೊಂಚ ನೆಮ್ಮದಿ ಸಿಕ್ಕಿದೆ. ಹೀಗಾಗಿ, ಫೆಬ್ರವರಿ ಅಂತ್ಯಕ್ಕೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಸಾಲವನ್ನು ರೈತರು ಮರುಪಾವತಿ ಮಾಡಬಹುದು.

ಶೇ. 3ರಷ್ಟು ಸಬ್ಸಿಡಿ : ಇದೇ ವೇಳೆ, ರೈತರಿಗೆ ಸಾಲ ಮರುಪಾವತಿಗೆ ಇನ್ನಷ್ಟು ಪ್ರೋತ್ಸಾಹಿಸುವ ಸಲುವಾಗಿ ಆರ್‍ಬಿಐ ರೈತರಿಗೆ ಇನ್ನೊಂದು ಆಫರ್ ನೀಡಿದೆ. ಪೂರ್ಣ ಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡಿದ ರೈತರಿಗೆ ಬಡ್ಡಿಯಲ್ಲಿ ಶೇಕಡಾ 3 ರಷ್ಟು ಸಬ್ಸಿಡಿ ಸಿಗಲಿದೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!