Friday , April 20 2018
Home / Film News / Bollywood / `ಪದ್ಮಾವತಿ’ ಚಿತ್ರದ ಸೆಟ್‍ನಿಂದ ಬಿಟ್ಟು ವರ್ಣಚಿತ್ರಕಾರ ಸಾವು

`ಪದ್ಮಾವತಿ’ ಚಿತ್ರದ ಸೆಟ್‍ನಿಂದ ಬಿಟ್ಟು ವರ್ಣಚಿತ್ರಕಾರ ಸಾವು

ನವದೆಹಲಿ: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ `ಪದ್ಮಾವತಿ’ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ಪೈಂಟರ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಿತ್ರಕ್ಕಾಗಿ ಸಮಾಧಿ ಕಟ್ಟುವ ಕೆಲಸದಲ್ಲಿ ತೊಡಗಿದ್ದ ವರ್ಣಚಿತ್ರಕಾರ ಮುಕೇಶ್ ದಾಕಿಯಾ ಸಾವನ್ನಪ್ಪಿದವರು. 34 ವರ್ಷದ ಮುಕೇಶ್ ದಾಕಿಯಾ 5 ಅಡಿ ಎತ್ತರದಿಂದ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.

ಮೇಲಿಂದ ಬಿದ್ದ ತಕ್ಷಣ ಮುಕೇಶ್ ಅವರ ಬೆನ್ನು ಮತ್ತು ತಲೆಗೆ ಭಾರೀ ಏಟು ಬಿದ್ದಿತು. ಕೂಡಲೇ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಇನ್ನು, ಪೊಲೀಸರು ಆಕಸ್ಮಿಕ ಅಪಘಡ ಎಂದು ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನು, ಈ ದುರಂತದ ಬಗ್ಗೆ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಸಂತಾಪ ವ್ಯಕ್ತಪಡಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!