Wednesday , January 24 2018
Home / Sandalwood / ಕಲಾವಿದ ಗುಂಡುಮಣಿ ವಿಧಿವಶ
Buy Bitcoin at CEX.IO

ಕಲಾವಿದ ಗುಂಡುಮಣಿ ವಿಧಿವಶ

ಬೆಂಗಳೂರು : ಗೋಡೆ ಚಿತ್ರಕಲಾವಿದ ಮತ್ತು ನಟ ಗುಂಡುಮಣಿ ವಿಧಿವಶರಾಗಿದ್ದಾರೆ. ವಿಜಯಪುರದಲ್ಲಿ ಹೃದಯಾಘಾತದಿಂದ ಇವರು ಕೊನೆಯುಸಿರೆಳೆದಿದ್ದು, ಇವರ ಅಂತ್ಯಕ್ರಿಯೆ ಹುಟ್ಟೂರು ತುಮಕೂರಿನಲ್ಲಿ ನಡೆದಿದೆ.

ಇವರ ನಿಜವಾದ ಹೆಸರು ಲೋಕೇಶ್. ಹಲವು ಚಿತ್ರಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ನಟಿಸಿದ್ದ ಲೋಕೇಶ್ ಗುಂಡುಮಣಿ ಎಂದೇ ಖ್ಯಾತಿ. ಗೋಡೆಚಿತ್ರದಲ್ಲೂ ಇವರು ಎತ್ತಿದ ಕೈ. ಶಿವರಾಜ್‍ಕುಮಾರ್ ಅಭಿನಯದ ಶ್ರೀಕಂಠ ಚಿತ್ರದ ಪ್ರಚಾರದ ಸಲುವಾಗಿ ವಿಜಯಪುರದಲ್ಲಿ ಪೇಂಟ್ ಮಾಡಲು ಹೋಗಿದ್ದ ಸಂದರ್ಭದಲ್ಲಿ ಇವರಿಗೆ ಹೃದಯಾಘಾತವಾಗಿದೆ. ಬೆಂಗಳೂರಿನ ಕೆಲಸ ಮುಗಿಸಿಕೊಂಡು ಇವರು ವಿಜಯಪುರಕ್ಕೆ ತೆರಳಿದ್ದರು.

ಶಿವರಾಜ್‍ಕುಮಾರ್ ಅಭಿನಯದ ಎಕೆ 47 ಚಿತ್ರದಿಂದ ಇವರು ವಾಲ್‍ಪೇಂಟಿಂಗ್ ಕಾರ್ಯ ಆರಂಭಿಸಿದ್ದರು. ಆದರೆ, ಕಾಕತಾಳೀಯ ಎಂದರೆ ಶಿವರಾಜ್‍ಕುಮಾರ್ ಅಭಿನಯದ ಚಿತ್ರದ ಪ್ರಚಾರದ ಕೆಲಸದಲ್ಲಿ ತೊಡಗಿದಾಗಲೇ ಇವರು ಕೊನೆಯುಸಿರೆಳೆದಿದ್ದಾರೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!