Saturday , September 22 2018
ಕೇಳ್ರಪ್ಪೋ ಕೇಳಿ
Home / News NOW / ಗುಡ್‍ನ್ಯೂಸ್, ಬಿಗ್ ರಿಲೀಫ್ : ಬ್ಯಾಂಕ್ ಸಾಲ ಮರುಪಾವತಿಗೆ 90 ದಿನಗಳ ಹೆಚ್ಚುವರಿ ಕಾಲಾವಕಾಶ

ಗುಡ್‍ನ್ಯೂಸ್, ಬಿಗ್ ರಿಲೀಫ್ : ಬ್ಯಾಂಕ್ ಸಾಲ ಮರುಪಾವತಿಗೆ 90 ದಿನಗಳ ಹೆಚ್ಚುವರಿ ಕಾಲಾವಕಾಶ

ನವದೆಹಲಿ : ನೋಟು ಬ್ಯಾನ್ ಬಳಿಕ ನಡೆದ ಒಂದೊಂದು ಘಟನೆಯ ಬಳಿಕ ಈಗ ಜನರಿಗೆ ಮತ್ತೊಂದು ಗುಡ್‍ನ್ಯೂಸ್ ಮತ್ತು ಬಿಗ್ ರಿಲೀಫ್ ಸಿಕ್ಕಿದೆ. ಅದೇನೆಂದರೆ ಬ್ಯಾಂಕ್‍ನ ಲೋನ್ ಕಟ್ಟಲು 90 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿ ಆರ್‍ಬಿಐ ಆದೇಶ ಹೊರಡಿಸಿದೆ. ಸಾಲ ಪಡೆದ ಜನರಿಗೆ 90 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಆರ್‍ಬಿಐ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದೆ.

ಒಂದು ಕೋಟಿ ವರೆಗಿನ ಹೌಸಿಂಗ್ ಲೋನ್, ವಾಹನ ಸಾಲ, ಬೆಳೆಸಾಲ ಮರುಪಾವತಿಗೆ ಆರ್‍ಬಿಐ ಈ ಹೆಚ್ಚುವರಿ ಕಾಲಾವಕಾಶ ನೀಡಿದೆ. ಮೊದಲು ಹೆಚ್ಚುವರಿ 30 ದಿನ ನೀಡಲು ಆರ್‍ಬಿಐ ನಿರ್ಧರಿಸಿತ್ತು. ಆದರೆ, ಈಗ ಹೆಚ್ಚುವರಿ 60 ದಿನ ಕೊಡಲಾಗಿದ್ದು, ಒಟ್ಟು 90 ದಿನಗಳ ಕಾಲಾವಕಾಶ ಜನರಿಗೆ ಸಿಗಲಿದೆ.

2016ರ ನವೆಂಬರ್ 1 ರಿಂದ ಡಿಸೆಂಬರ್ 31ರೊಳಗಿನ ಸಾಲ ಮರುಪಾವತಿಗೆ ಈ ನೀತಿ ಅನ್ವಯವಾಗುತ್ತದೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!